ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ –ಕಾಂಗ್ರೆಸ್ ಸಮ್ಮಿಶ್ರ ಆಡಳಿತ

ಚಿಕ್ಕೋಡಿ ಪುರಸಭೆ ಚುನಾವಣೆ: ವೀಣಾ ಜಗದೀಶ ಅಧ್ಯಕ್ಷೆ, ಇರ್ಫಾನ್‌ ಉಪಾಧ್ಯಕ್ಷ
Published : 12 ಸೆಪ್ಟೆಂಬರ್ 2024, 15:56 IST
Last Updated : 12 ಸೆಪ್ಟೆಂಬರ್ 2024, 15:56 IST
ಫಾಲೋ ಮಾಡಿ
Comments

ಚಿಕ್ಕೋಡಿ: ಪಟ್ಟಣದ ಪುರಸಭೆಗೆ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಗುರುವಾರ ನಡೆದಿದ್ದು, ಅಧ್ಯಕ್ಷರಾಗಿ ಬಿಜೆಪಿಯ ವೀಣಾ ಜಗದೀಶ ಕವಟಗಿಮಠ, ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಇರ್ಫಾನ್ ಬೇಪಾರಿ ಅವಿರೋಧವಾಗಿ ಆಯ್ಕೆಯಾದರು.

23 ಸದಸ್ಯ ಬಲ ಹೊಂದಿರುವ ಚಿಕ್ಕೋಡಿ ಪುರಸಭೆಯ 2ನೇ ಅವಧಿಗೆ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಹೀಗಾಗಿ ಅಧ್ಯಕ್ಷರಾಗಿ ವೀಣಾ ಜಗದೀಶ ಕವಟಗಿಮಠ, ಉಪಾಧ್ಯಕ್ಷರಾಗಿ ಇರ್ಫಾನ್ ಬೇಪಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯೂ ಆಗಿದ್ದ ತಹಶಿಲ್ದಾರ್‌ ಚಿದಂಬರ ಕುಲಕರ್ಣಿ ಅವರು ಫಲಿತಾಂಶ ಘೋಷಿಸಿದರು.

‘ಸಾಮಾನ್ಯ ಮಹಿಳೆ’ಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ 20ನೇ ವಾರ್ಡ್‌ನ ವೀಣಾ ಕವಟಗಿಮಠ, ಹಿಂದುಳಿದ ವರ್ಗ ‘ಅ’ ಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 8ನೇ ವಾರ್ಡ್‌ನ ಇರ್ಫಾನ್ ಬೇಪಾರಿ ಅವಿರೋಧವಾಗಿ ಆಯ್ಕೆಯಾಗಿದ್ದು, ಈ ಇಬ್ಬರೂ ಇದೇ ಮೊದಲ ಬಾರಿಗೆ ಪುರಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ತೆರೆಮರೆಯ ಕಸರತ್ತು: 23 ಸದಸ್ಯರ ಪೈಕಿ 10 ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರು, 13 ಜನ ಬಿಜೆಪಿ ಬೆಂಬಲಿತ ಸದಸ್ಯರು ಇದ್ದಾರೆ. ದೆಹಲಿ ವಿಶೇಷ ಪ್ರತಿನಿಧಿ –2, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಚಿಕ್ಕೋಡಿ -ಸದಲಗಾ ಶಾಸಕ ಗಣೇಶ ಹುಕ್ಕೇರಿ ಹಾಗೂ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವೀಣಾ ಕವಟಗಿಮಠ ಅವರ ಪತಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರ ಸಹೋದರ ಜಗದೀಶ ಕವಟಗಿಮಠ ಅವರ ತೆರೆಮರೆಯ ಆಟದಿಂದ ಕಾಂಗ್ರೆಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ಚಿಕ್ಕೋಡಿ ಪುರಸಭೆಯ ಅಧಿಕಾರ ಪಡೆದುಕೊಳ್ಳಲು ಕಾರಣವಾಗಿದೆ.

ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಎರಡೂ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಜಗದೀಶ ಕವಟಗಿಮಠ, ಪ್ರಭಾಕರ ಐ ಕೋರೆ, ರಾಮಾ ಮಾನೆ, ಶ್ಯಾಮ ರೇವಡೆ, ಗುಲಾಬಹುಸೇನ ಬಾಗವಾನ, ವಿಶ್ವನಾಥ ಕಾಮಗೌಡ , ಸಂಜಯ ಕವಟಗಿಮಠ, ಪ್ರವೀಣ ಕಾಂಬಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT