ಚಿಕ್ಕೋಡಿ: ‘ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಲ ಸೌಲಭ್ಯ ನೀಡುವ ಉದ್ದೇಶದಿಂದ ಪಟ್ಟಣದಲ್ಲಿ ಛತ್ರಪತಿ ಶಾಹು ಮಹಾರಾಜರ ಹೆಸರಿನಲ್ಲಿ ಸೊಸೈಟಿ ಸ್ಥಾಪಿಸಲಾಗಿದೆ. ಸೊಸೈಟಿ ಮೂಲಕ ಸಮಾಜಮುಖಿ ಕೆಲಸ ಕೂಡ ಮಾಡಲಾಗುವುದು’ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಹಾವೀರ ಮೋಹಿತೆ ಹೇಳಿದರು.

ಪಟ್ಟಣದ ಪ್ರವಾಸಿಮಂದಿರದ ಎದುರು ಸೋಮವಾರ ಛತ್ರಪತಿ ಶಾಹು ಮಹಾರಾಜ ಕೋ ಅಪರೇಟಿವ್ ಕ್ರೆಡಿಟ್ ಸೊಸೈಟಿ ಉದ್ಘಾಟಿಸಿ ಅವರು ಮಾತನಾಡಿದರು.

‘ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಸೊಸೈಟಿಯ ಶಾಖೆಗಳನ್ನು ತೆರೆಯುವ ಉದ್ದೇಶ ಹೊಂದಲಾಗಿದೆ’ ಎಂದರು.

ಮುಖಂಡ ರುದ್ರಪ್ಪ ಸಂಗಪ್ಪಗೋಳ ಮಾತನಾಡಿ, ‘ಮಹಾವೀರ ಮೋಹಿತೆ ಅವರು 2 ದಶಕಗಳಿಂದ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತ ಬಂದಿದ್ದು, ಇದೀಗ ಸಹಕಾರ ಕ್ಷೇತ್ರದಲ್ಲಿ ಅಡಿ ಇಟ್ಟಿದ್ದಾರೆ’ ಎಂದರು. ಅರ್ಜುನ ಬಂಡಗರ, ದಿಲೀಪ ಜಮಾದಾರ, ಲಗಮಣ್ಣಾ ನಾಗರಾಳೆ, ಗಣೇಶ ಮೋಹಿತೆ, ಉಪಾಧ್ಯಕ್ಷೆ ಜಯಶ್ರೀ ಮೋಹಿತೆ, ನಿರ್ದೇಶಕರಾದ ಸುರೇಶ ಖೋತ, ಕೃಷ್ಣಾ ಜಿಗಳೆ, ಅರುಣ ನರಗುಂದೆ, ಜಂಬು ಮೋಹಿತೆ, ಮಹ್ಮದ ಪಟೇಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-21-883352567

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.