ಚಿಕ್ಕೋಡಿ: ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದ್ದು, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಸ್ಯೆ ಇರುವ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಯಿಸಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಲು ಪ್ರಯತ್ನ ಮಾಡುವೆ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ತಾಲ್ಲೂಕಿನ ಜಾಗನೂರ ಗ್ರಾಮದಲ್ಲಿ ₹ 65 ಲಕ್ಷ ಮೊತ್ತದ ರಸ್ತೆ ಸುಧಾರಣೆ ಕಾಮಗಾರಿಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಜಾಗನೂರು ಗ್ರಾಮದ ಹೊರವಲಯದಲ್ಲಿ ಜಿಲ್ಲಾ ಪಂಚಾಯಿತಿಯ ವಿಶೇಷ ಯೋಜನೆ ಅಡಿಯಲ್ಲಿ ₹ 40 ಲಕ್ಷ ಮೊತ್ತದಲ್ಲಿ ರಸ್ತೆ ಸುಧಾರಣಾ ಕಾಮಗಾರಿ, ಎಸ್ಸಿ, ಎಸ್ಟಿ ಕಾಲೊನಿಯಲ್ಲಿ ₹ 25 ಲಕ್ಷ ಮೊತ್ತದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಚಾಲನೆ ನೀಡಿದರು.

ಮುಖಂಡರಾದ ಸದಾಶಿವ ಘೋರ್ಪಡೆ, ಸೀತಾರಾಮ ಕುಲಕರ್ಣಿ, ಸುರೇಶ ಬೆಲ್ಲದ, ಹನುಮಂತ ರಬಕವಿ, ಲಕ್ಷ್ಮಣ ಹನುಮನ್ನವರ, ಸಿದ್ಧು ಖಿಂಡಿ, ಮಲ್ಲೇಶ ಹನುಮಂತಗೋಳ, ಮಹಾಂತೇಶ ಶಿರಗೂರ, ಮಾಳಪ್ಪ ಗೊರಗುದ್ದಿ, ದುಂಡಪ್ಪ ಮುಶಾಪ, ಕಿರಣಗೌಡ ಪಾಟೀಲ, ರಾಮಚಂದ್ರ ಮರಾಠ, ರಾಮಕೃಷ್ಣ ಗಡಗಡಿ, ಎಸ್ ಎಸ್ ಹೊಸಮನಿ, ರವಿ ಜಿವಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-21-629576959

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.