ಚಿಕ್ಕೋಡಿ: ತೋರಣಹಳ್ಳಿಯ ಮಾರುತಿ ದೇವರ ಕೃಪೆಯಿಂದ ಒಳ್ಳೆಯ ಅನುಭವವಾಗಿದೆ. ಹಾಗಾಗಿ ಇಲ್ಲಿಗೆ ಆಗಾಗ ಭೇಟಿ ನೀಡಿ ದೇವರ ಆಶೀರ್ವಾದವನ್ನು ಪಡೆದುಕೊಳ್ಳುತೇನೆ ಎಂದು ಮಹಾರಾಷ್ಟ್ರ ಸಚಿವ ಹಸನ್ ಮುಶ್ರೀಫ್ ಹೇಳಿದರು.

ತಾಲ್ಲೂಕಿನ ತೋರಣಹಳ್ಳಿ ಗ್ರಾಮದ ಮಾರುತಿ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ಮಾರುತಿ ದೇವರು ಅನೇಕ ಜನರ ಕಷ್ಟ ನಿವಾರಣೆ ಮಾಡಿದಂತೆ ನನ್ನ ಕಷ್ಟವನ್ನೂ ನಿವಾರಣೆ ಮಾಡಿದ್ದಾನೆ. ಹೀಗಾಗಿ ಈ ದೇವಸ್ಥಾನಕ್ಕೆ ವೈಯಕ್ತಿಕವಾಗಿ ತಾನು ₹30 ಲಕ್ಷ ದೇಣಿಗೆ ನೀಡಿದ್ದು, ದೇವಸ್ಥಾನದ ದೀಪ ಸ್ಥಂಭ ನಿರ್ಮಾಣಕ್ಕೆ ಇದನ್ನು ದೇವಸ್ಥಾನ ಕಮಿಟಿಯವರು ವಿನಿಯೋಗಿಸುತ್ತಿದ್ದಾರೆ ಎಂದರು.

ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಚಿಕ್ಕೋಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿ ಅವರು ದೇವಸ್ಥಾನದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದು, ದೇವಸ್ಥಾನದ ಅಭಿವೃದ್ಧಿ ಕಾರ್ಯದಲ್ಲಿ ಭಾಗಿಯಾಗಿದ್ದು ಸಂತಸ ತಂದಿದೆ ಎಂದರು.

ಸ್ಥಳೀಯರಾದ ಕುಮಾರ ಪಾಟೀಲ, ಬಸವರಾಜ ಮಾಳಗೆ, ಕಿಶೋರ ಪವಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-21-1517234081

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.