ಚಿಕ್ಕೋಡಿ: ಸಮೀಪದ ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಪಟ್ಟಣ ಹಾಗೂ ಮಾಣಕಾಪೂರ ಗ್ರಾಮದಲ್ಲಿ ಗುರುವಾರ ತಡರಾತ್ರಿ ಜೋರಾಗಿ ಬೀಸಿದ ಮಳೆ ಗಾಳಿಯಿಂದ ಶಾಲೆಯ ತಗಡಿನ ಚಾವಣಿ ಹಾರಿ ಹೋಗಿದ್ದು, ಜವಳಿ ಘಟಕದೊಳಗೆ ನೀರು ನುಗ್ಗಿ ಯಂತ್ರೋಪಕರಣಗಳು ಹಾನಿಗೊಳಗಾಗಿವೆ.

ಮಾಣಕಾಪೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಚಾವಣಿ ಹಾರಿ ಹೋಗಿದೆ. ಶಾಲೆಯ ಕೆಲವೊಂದು ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕಿಟಕಿ ಬಾಗಿಲುಗಳಿಗೂ ಹಾನಿಯಾಗಿದೆ.

ಬೋರಗಾಂವ ಪಟ್ಟಣದಲ್ಲಿಯ ಕೆಲವೊಂದು ಜವಳಿ ಘಟಕಗಳಿಗೆ ನೀರು ನುಗ್ಗಿದ್ದು, ಯಂತ್ರೋಪಕರಣಗಳು ನೀರಿನಲ್ಲಿ ನಿಂತಿವೆ. ಹೀಗಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ. ಘಟನಾ ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳೊಂದಿಗೆ ಯುವ ಮುಖಂಡ ಉತ್ತಮ ಪಾಟೀಲ ಶುಕ್ರವಾರ ಭೇಟಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-21-476854059

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.