ಚಿಕ್ಕೋಡಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಅಡಿಯಲ್ಲಿ ಕಾರ್ಯನಿರ್ವಹಿಸುವ ಚಿಕ್ಕೋಡಿ ತಾಲ್ಲೂಕು ಕಾರ್ಯಕಾರಿ ಸಮಿತಿಗೆ ನಡೆದ 2026-31ರ ಅವಧಿಗೆ ಪಟ್ಟಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಎನ್.ಜಿ.ಪಾಟೀಲ ನೇತೃತ್ವದ ಗುರು ಪ್ರೇರಣಾ ಪೆನಲ್ ಭರ್ಜರಿ ಗೆಲುವು ಸಾಧಿಸಿದೆ.

ಚಿಕ್ಕೋಡಿ ತಾಲ್ಲೂಕು ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಗುರು ಪ್ರೇರಣಾ ಪೆನಲ್ನ 10 ಅಭ್ಯರ್ಥಿಗಳು ಹಾಗೂ ಸರ್ವಧರ್ಮ ಸಮನ್ವಯ ಪೆನಲ್ನ 4 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಪಟ್ಟಣದ ಇಂದಿರಾನಗರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಬೆಳಿಗ್ಗೆ 8.30ರಿಂದ ಸಂಜೆ 4.30 ರವರೆಗೆ ಮತದಾನ ನಡೆಯಿತು. 9 ಪುರುಷ ಅಭ್ಯರ್ಥಿಗಳು ಹಾಗೂ 5 ಮಹಿಳಾ ಅಭ್ಯರ್ಥಿಗಳು ಆಯ್ಕೆಗೆ ನಡೆದ ಮತದಾನ ಪ್ರಕ್ರಿಯೆ ಶಾಂತವಾಗಿ ನಡೆಯಿತು. ತಡರಾತ್ರಿ ಮತ ಎಣಿಕೆ ಪೂರ್ಣಗೊಂಡಿತು.

ಚಿಕ್ಕೋಡಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಒಟ್ಟು 685 ಮತಗಳ ಪೈಕಿ 636 ಮತಗಳು ಚಲಾವಣೆಯಾಗಿವೆ. ಶೇ 92.8 ಮತದಾನ ನಡೆದಿದ್ದು, ಇವುಗಳಲ್ಲಿ 6 ತಿರಸ್ಕರಿಸಲ್ಪಟ್ಟಿವೆ.

ಗುರುಪ್ರೇರಣಾ ಪೆನಲ್ನ ಎನ್.ಜಿ.ಪಾಟೀಲ (396 ಮತ), ಎಸ್.ಎ.ಖಡ್ಡ (362), ಪ್ರಭಾಕರ ಮಜಲಟ್ಟಿ (358), ಮಹಾವೀರ ಕಾಂಬಳೆ (341), ಡಿ ಎಚ್ ಕಾಂಬಳೆ (303), ವಿಶ್ವನಾಥ ಧುಮಾಳ (294), ಡಿ.ಆರ್.ಛಲವಾದಿ (241), ಸಂಗೀತಾ ಗಿರಿಮಲ್ಲನವರ (349), ಶೈಲಶ್ರೀ ಜೋಶಿ (312) , ಸಿದ್ದವ್ವ ಬಡ್ಲಿ (268) ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಸರ್ವಧರ್ಮ ಸಮನ್ವಯ ಪೆನಲ್ನ ಜಿ.ಎಂ.ಕಾಂಬಳೆ (396), ಎಸ್.ಎಸ್.ಧುಪದಾಳ (316), ಲತಾ ಯಾದಗೂಡೆ (276), ಸವಿತಾ ಧೋತರ (269) ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಯಟ್ ನಿವೃತ್ತ ಪ್ರಾಚಾರ್ಯ ಎಂ.ಪಿ.ಜೀರಗಿಹಾಳ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-21-186244939

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.