ಚಿಕ್ಕೋಡಿ: ಜಿಲ್ಲಾ ಕೇಂದ್ರವಾಗುವ ನಿಟ್ಟಿನಲ್ಲಿ ಬೆಳೆದು ನಿಂತಿರುವ ಚಿಕ್ಕೋಡಿ ಪಟ್ಟಣದಲ್ಲಿ ರಂಗಮಂದಿರ ಇಲ್ಲದ್ದರಿಂದ ರಂಗಭೂಮಿ ಬಡವಾಗಿದೆ.

ನಾಟಕ, ನೃತ್ಯ, ಸಂಗೀತ, ಜಾನಪದ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಜಿಲ್ಲಾ ಮಟ್ಟದ ರಂಗಮಂದಿರವೂ ಇಲ್ಲ, ತಾಲ್ಲೂಕು ಮಟ್ಟದ ರಂಗಮಂದಿರವೂ ಇಲ್ಲ.

ವೃತ್ತಿರಂಗಭೂಮಿಯ ಕಲಾವಿದರು ಚಿಕ್ಕೋಡಿ ಪಟ್ಟಣಕ್ಕೆ ಆಗಾಗ ಆಗಮಿಸಿ ತಮ್ಮ ಕಲೆ ಪ್ರದರ್ಶನ ಮಾಡುತ್ತಾರೆ. ಹೀಗೆ ಆಗಮಿಸಿದ ವಿವಿಧ ನಾಟಕ ಕಂಪನಿಯ ಕಲಾವಿದರು ಬರಿಗೈಯಲ್ಲಿ ಮರಳಿದ ನಿದರ್ಶನಗಳೇ ಇಲ್ಲ. ವಿವಿಧ ಕಂಪನಿಯ ನಾಟಕಗಳು ನೂರಕ್ಕೂ ಹೆಚ್ಚು ಪ್ರದರ್ಶನ ಕಂಡ ಉದಾಹರಣೆಗಳು ಸಾಕಷ್ಟಿವೆ.

ಪಟ್ಟಣದ ಮಧ್ಯ ಭಾಗದಲ್ಲಿ ಖಾಸಗಿ ಜಾಗೆಯಲ್ಲಿ ತಾತ್ಕಾಲಿಕ ಟೆಂಟ್ ಹಾಕಿ ನಾಟಕ ಪ್ರದರ್ಶನ ಮಾಡುವುದು ನಾಟಕ ಕಂಪನಿಗಳಿಗೆ ಹೊರೆಯಾಗುತ್ತಿದೆ. ಅಲ್ಲದೇ, ಸ್ಥಳೀಯವಾಗಿ ನೂರಾರು ಕಲಾವಿದರು ಇದ್ದು, ಇವರು ತಮ್ಮ ಕಲಾಪ್ರದರ್ಶನಕ್ಕೆ ಖಾಸಗಿ ಕಲ್ಯಾಣಮಂಟಪ, ಕಿರಿದಾದ ಸಮುದಾಯ ಭವನ ಆಧರಿಸುವುದು ಅನಿವಾರ್ಯವಾಗಿದೆ. ದುಬಾರಿ ಬಾಡಿಗೆ ಕಟ್ಟುವುದು ಅಸಾಧ್ಯವಾಗಿದೆ. ಸರ್ಕಾರಿ ಸಭಾಂಗಣಗಳು ಇಲ್ಲಿ ತುಂಬಾ ಕಿರಿದಾಗಿವೆ. ಹೀಗಾಗಿ ಕಲಾವಿದರು ತಮ್ಮ ಕಲಾಪ್ರದರ್ಶನಕ್ಕೆ ಸಮರ್ಪಕ ವೇದಿಕೆ ಸಿಗಬೇಕಾದರೆ ರಂಗಮಂದಿರ ನಿರ್ಮಾಣದ ಅವಶ್ಯಕತೆ ತುಂಬಾ ಇದೆ.

ದಶಕದ ಹಿಂದೆ ಚಿಕ್ಕೋಡಿ ಪಟ್ಟಣದಲ್ಲಿ ರಂಗಮಂದಿರ ನಿರ್ಮಾಣಕ್ಕಾಗಿ ₹1 ಕೋಟಿ ಅನುದಾನ ಮಂಜೂರಾಗಿತ್ತು. ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಚಿಕ್ಕೋಡಿ ಪಟ್ಟಣದಲ್ಲಿ ನಿರ್ಮಾಣವಾಗಬೇಕಾದ ರಂಗಮಂದಿರ ಬೇರೊಂದು ತಾಲ್ಲೂಕಿಗೆ ಸ್ಥಳಾಂತರವಾಯಿತು.

ಪಟ್ಟಣದಲ್ಲಿ ಜಿಲ್ಲಾ ಮಟ್ಟದ ಬಹುತೇಕ ಕಚೇರಿಗಳಿದ್ದು, ಸುತ್ತಮುತ್ತಲಿನ ತಾಲ್ಲೂಕುಗಳಿಗೆ ಚಿಕ್ಕೋಡಿ ಕೇಂದ್ರಸ್ಥಾನವಾಗಿದೆ. ಹೀಗಾಗಿ ಚಿಕ್ಕೋಡಿ ಪಟ್ಟಣದಲ್ಲೊಂದು ಜಿಲ್ಲಾ ಮಟ್ಟದ ರಂಗಮಂದಿರ ನಿರ್ಮಾಣವಾಗಬೇಕಿದೆ.

ಸಣ್ಣಾಟ, ದೊಡ್ಡಾಟ, ಬಯಲಾಟ, ಶ್ರೀಕೃಷ್ಣ ಪಾರಿಜಾತ ಕಲಾವಿದರು ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಇಂತಹ ಕಲಾವಿದರು ಕಲಾಭಿವ್ಯಕ್ತಿಯನ್ನು ಹೆಚ್ಚಿಸಲು ರಂಗಮಂದಿರ ನಿರ್ಮಾಣ ದಿಂದ ಪ್ರೇರಣೆ ಸಿಗಬಹುದಾಗಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಕನ್ನಡ ರಂಗಭೂಮಿಯ ಕೋಟೆಯನ್ನು ಶತಮಾನದ ಹಿಂದೆಯೇ ಕಟ್ಟಿದ ಶಿವಲಿಂಗಶಾಸ್ತ್ರಿಯವರು ಚಿಕ್ಕೋಡಿಯವರೇ ಆಗಿದ್ದಾರೆ. ನೂರು ವರ್ಷಗಳ ಹಿಂದೆಯೇ 40ಕ್ಕೂ ಹೆಚ್ಚು ನಾಟಕಗಳನ್ನು ಕನ್ನಡದಲ್ಲಿ ರಚಿಸಿ ಪ್ರದರ್ಶಿಸಿದ ಹಿರಿಮೆ ಶಿವಲಿಂಗಶಾಸ್ತ್ರಿ ಅವರದು. ರಂಗಮಂದಿರ ನಿರ್ಮಾಣ ಮಾಡಿದಲ್ಲಿ ಇಂತಹ ನಾಟಕಕಾರರ ನಾಟಕಗಳನ್ನು ಪ್ರದರ್ಶಿಸಲು ಅನುಕೂಲವಾಗುತ್ತದೆ ಎಂಬುದು ಆಸಕ್ತರ ಹಂಬಲ.

ಚಿಕ್ಕೋಡಿಯಲ್ಲೊಂದು ಜಿಲ್ಲಾಮಟ್ಟದ ರಂಗಮಂದಿರದ ಅವಶ್ಯಕತೆ ಇದೆ. ರಂಗಮಂದಿರ ನಿರ್ಮಾಣದಿಂದ ಸಾಂಸ್ಕೃತಿಕವಾಗಿ ಹಿರಿಮೆ ಪಡೆಯುತ್ತದೆ
ಭರತ ಕಲಾಚಂದ್ರ, ರಂಗಭೂಮಿ ಕಲಾವಿದ, ಧುಳಗನವಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.