ಶನಿವಾರ, ಜನವರಿ 18, 2020
18 °C

ಬಸ್‌ ಹರಿದು ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ತಾಲ್ಲೂಕಿನ ದೇಸೂರ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಸಾರಿಗೆ ಬಸ್‌ ಹರಿದು ಬಾಲಕ ಮೃತಪಟ್ಟನು.

ದೇಸೂರ ಗ್ರಾಮದ ಮಹ್ಮದ್‌ಗೌಸ್ ನಿಯಾಮತ್ ಚೌಧರಿ (9) ಮೃತ.

ಈತ ಕ್ಯಾಂಪ್‌ನ ಇಸ್ಲಾಮಿಯಾ ಶಾಲೆ ವಿದ್ಯಾರ್ಥಿ ಎಂದು ಗೊತ್ತಾಗಿದೆ. ಬಸ್ ಹತ್ತುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಅದೇ ಸಮಯಕ್ಕೆ ಚಾಲಕ ಬಸ್‌ ಚಲಾಯಿಸಿದ್ದರಿಂದ ಚಕ್ರ ವಿದ್ಯಾರ್ಥಿ ಮೇಲೆ ಹರಿದಿದೆ. ಬಾಲಕ ಬಿದ್ದಿದ್ದುದು ಚಾಲಕನಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)