ಖಾನಾಪುರ: ತಾಲ್ಲೂಕಿನ ನಾಗರಗಾಳಿ ಗ್ರಾಮದ ಹೊರವಲಯದ ರಾಮನಗರ-ಧಾರವಾಡ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಎರಡು ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಒಬ್ಬ ಚಾಲಕ ಮೃತಪಟ್ಟು ಮತ್ತೊಬ್ಬ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗೋವಾದಿಂದ ಹುಬ್ಬಳ್ಳಿ ಮಾರ್ಗವಾಗಿ ತೆಲಂಗಾಣ ರಾಜ್ಯದತ್ತ ಹೊರಟಿದ್ದ ಪ್ರಯಾಣಿಕರ ಕಾರು ಅಳ್ನಾವರದಿಂದ ರಾಮನಗರ ಕಡೆಗೆ ಹೊರಟಿದ್ದ ಕಾರಿಗೆ ಎದುರಿನಿಂದ ಬಂದು ವೇಗವಾಗಿ ಅಪ್ಪಳಿಸಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ವಾಸ್ಕೋ ನಿವಾಸಿ ಅಮೀರಖಾನ ಬೆಂಡಿಗೇರಿ (26) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ಮೂಲದ ರಾಜಶೇಖರ ರೆಡ್ಡಿ ಗಾಯಗೊಂಡಿದ್ದಾರೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.