ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ‘ಸರ್ವ ಧರ್ಮಗಳನ್ನೂ ಗೌರವಿಸಿ’

Last Updated 4 ಸೆಪ್ಟೆಂಬರ್ 2022, 16:26 IST
ಅಕ್ಷರ ಗಾತ್ರ

ಬೆಳಗಾವಿ: ಬುದ್ಧ, ಬಸವ, ಅಂಬೇಡ್ಕರ್, ಏಸು ಮುಂತಾದ ಮಹನೀಯರು ಜಗತ್ತಿಗೆ ಶಾಂತಿ, ಪ್ರೀತಿ, ವಾತ್ಸಲ್ಯ ಕಲಿಸಿ ಹೋಗಿದ್ದಾರೆ. ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಜೀವನಕ್ಕೆ ಅರ್ಥ ಸಿಗಲಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಗಣೇಶಪುರದ ಶಿವಂ ನಗರದಲ್ಲಿರುವ ಸೇಂಟ್‌ ಜಾನ್ ಬಾಪ್ಟಿಸ್ಟ್ ಚರ್ಚ್ ಸುತ್ತಮುತ್ತಲಿನ ರಸ್ತೆಗಳನ್ನು ನಿರ್ಮಾಣ ಮಾಡಿದ ಕಾರಣ ಚರ್ಚಿನ ಪದಾಧಿಕಾರಿಗಳು ಭಾನುವಾರ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ದೇವನೊಬ್ಬ ನಾಮ ಹಲವು ಎನ್ನುವ ಹಾಗೆ ವಿವಿಧ ಧರ್ಮೀಯರು ತಮ್ಮದೇ ಆದ ಪದ್ಧತಿಯಲ್ಲಿ ದೇವರನ್ನು ಸ್ಮರಿಸುತ್ತಾರೆ. ಆದರೆ, ಎಲ್ಲ ಧರ್ಮಗಳ ಸಾರ ಒಂದೇ ಆಗಿದೆ ಎಂಬುದನ್ನು ಜನಜನಿತ ಮಾಡಬೇಕಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಮೃಣಾಲ್ ಹೆಬ್ಬಾಳಕರ ಅವರನ್ನು ಸನ್ಮಾನಿಸಲಾಯಿತು. ಫಾದರ್ ಮೈಕೆಲ್ ಫರ್ನಾಂಡಿಸ್, ಸಿಸ್ಟರ್ ರೀನಾ, ಸಂತೋಷ ಫರ್ನಾಂಡಿಸ್, ಮಿಲನ್ ಡಿಸೋಜಾ ಹಾಗೂ ಶಿವಂ ನಗರದ ನಿವಾಸಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT