ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ರೈತರಿಗೆ ಸಹಕಾರ ಸಂಘ ವರದಾನ‘

Published : 26 ಸೆಪ್ಟೆಂಬರ್ 2024, 14:47 IST
Last Updated : 26 ಸೆಪ್ಟೆಂಬರ್ 2024, 14:47 IST
ಫಾಲೋ ಮಾಡಿ
Comments

ಮುನವಳ್ಳಿ: ‘ಸರ್ಕಾರ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ವಿತರಿಸಿ ಕೃಷಿಗೆ ಉತ್ತೇಜನ ನೀಡುತ್ತಿದೆ ಇದರ ಸೌಲಭ್ಯ ಪಡೆದು ರೈತರು ಆರ್ಥಿಕ ವ್ಯವಸ್ಥೆ ಬಲಪಡಿಸಿಕೊಳ್ಳಬೇಕು’ ಎಂದು ಸಂಘದ ಅಧ್ಯಕ್ಷ ಪಂಚನಗೌಡ ದ್ಯಾಮನಗೌಡರ  ಹೇಳಿದರು.

ಪಟ್ಟಣದ ಮಲ್ಲಿಕಾರ್ಜುನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಈಚೆಗೆ ನಡೆದ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ರೈತರ ಆರ್ಥಿಕ ಮಟ್ಟ ಸುಧಾರಣೆಗೆ ಸಹಕಾರ ಸಂಘಗಳು ವರದಾನವಾಗಿವೆ’ ಎಂದರು.

ಸಂಘದ ನಿರ್ದೇಶಕ ಎಂ.ಕೆ.ಹಿರೇಮಠ ಮಾತನಾಡಿ, ರೈತರು ಸಕಾಲಕ್ಕೆ ಸಾಲ ಮರು ಪಾವತಿಸಬೇಕು’ ಎಂದು ಹೇಳಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ರಾಜೇಶ ಹಿಂಬರಕಿ ಸಂಘದಲ್ಲಿ 980 ಸದಸ್ಯರಿದ್ದು, ₹5.53 ಕೋಟಿ ಸಾಲ ನೀಡಿ ಸಂಘವು ಲಾಭದಲ್ಲಿ ಇದೆ ಎಂದರು.‌

ಸಂಘದ ಉಪಾಧ್ಯಕ್ಷ ಪಂಚಪ್ಪ ಹನಸಿ, ನಿರ್ದೇಶಕರಾದ ಪಂಚಪ್ಪ ಗುಂಡ್ಲೂರ, ಪಂಚಲಿಂಗಪ್ಪ ಗೊಂದಿ, ಅಲ್ಲಿಸಾಬ್‌ ಕೊಳಚಿ, ಅಲ್ಲಪ್ಪ ಚುಳಕಿ, ಶಂಕ್ರೆವ್ವ ಗೋಕಾಕ, ರಾಜೇಶ್ವರಿ ಬಾಳಿ, ಶಿವಾನಂದ ಭಜಂತ್ರಿ, ಗೋಪಾಲ ತಳವಾರ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT