ಗ್ರಾಮ ಪಂಚಾಯಿತಿ ಚುನಾವಣೆ: ದಂಪತಿ, ಸಹೋದರರ ಜಯಭೇರಿ

ಚಿಕ್ಕೋಡಿ: ತಾಲ್ಲೂಕಿನ ಅಂಕಲಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸಹೋದರರು, ಪತಿ-ಪತ್ನಿ ಮತ್ತು ತಂದೆ-ಮಗಳು ಜಯ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಸುರೇಶ ಪಾಟೀಲ ವಾರ್ಡ್ ಸಂಖ್ಯೆ 5ರಲ್ಲಿ ಜಯ ಗಳಿಸಿದರೆ, ಅವರ ಪತ್ನಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಶೈಲಜಾ ಪಾಟೀಲ ವಾರ್ಡ್ ಸಂಖ್ಯೆ 9ರಿಂದ ಆಯ್ಕೆಯಾದರು. ಇವರಿಬ್ಬರೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ.
ವಾರ್ಡ್ ಸಂಖ್ಯೆ 7ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುರೇಶ ವಡ್ಡರ ಆಯ್ಕೆಗೊಂಡಿದ್ದು, ಇವರ ಮಗಳು ಪದ್ಮಾವತಿ ವಡ್ಡರ ವಾರ್ಡ್ ಸಂಖ್ಯೆ 9ರಿಂದ ಗೆಲುವು ಪಡೆದಿದ್ದಾರೆ.
ವಾರ್ಡ್ ಸಂಖ್ಯೆ 3ರಲ್ಲಿ ರಂಜಿತ್ ಶಿರಶೆಟ್ ಆಯ್ಕೆಯಾಗಿದ್ದರೆ, ವಾರ್ಡ್ ಸಂಖ್ಯೆ 1ರಲ್ಲಿ ಸಹೋದರ ವಿಕ್ರಂ ಶಿರಶೆಟ್ ಆಯ್ಕೆಯಾಗಿದ್ದಾರೆ. ಇವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.