ಮಂಗಳವಾರ, ಜೂನ್ 15, 2021
23 °C

ಕೋವಿಡ್‌: ಮೃತರ ಸಂಖ್ಯೆ 85ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೋವಿಡ್‌ ಸೋಂಕಿನಿಂದಾಗಿ ಹೊಸದಾಗಿ 10 ಜನ ಮೃತಪಟ್ಟಿದ್ದು, ಒಟ್ಟು ಮೃತರಾದವರ ಸಂಖ್ಯೆ 85ಕ್ಕೆ ತಲುಪಿದೆ. ಬೆಳಗಾವಿಯ 4, ರಾಮದುರ್ಗ ಹಾಗೂ ಅಥಣಿಯ ತಲಾ ಇಬ್ಬರು, ಬೈಲಹೊಂಗಲ, ಚಿಕ್ಕೋಡಿಯ ಒಬ್ಬೊಬ್ಬರು ಮೃತರಾಗಿದ್ದಾರೆ.

ಬೆಳಗಾವಿಯ 56 ವರ್ಷದ ಪುರುಷ (ಪಿ–143551), 68 ವರ್ಷದ ವೃದ್ಧ (ಪಿ– 134414), 56 ವರ್ಷದ ಪುರುಷ (ಪಿ–122317) ಹಾಗೂ 47 ವರ್ಷದ ವೃದ್ಧೆ (ಪಿ–114997), ರಾಮದುರ್ಗದ 50 ವರ್ಷದ ಪುರುಷ (ಪಿ–138026) ಹಾಗೂ 51 ವರ್ಷದ ಪುರುಷ (ಪಿ–143683), ಅಥಣಿಯ 70 ವರ್ಷದ ವೃದ್ಧ (ಪಿ– 94282) ಹಾಗೂ 70 ವರ್ಷದ ವೃದ್ಧ (ಪಿ–120136), ಬೈಲಹೊಂಗಲದ 54 ವರ್ಷದ ಪುರುಷ (ಪಿ– 103335), ಚಿಕ್ಕೋಡಿಯ 75 ವರ್ಷದ ಪುರುಷ (ಪಿ–137321) ಮೃತರಾಗಿದ್ದಾರೆ.

60 ಜನರಿಗೆ ಸೋಂಕು

ಜಿಲ್ಲೆಯ 60 ಜನರಿಗೆ ಹೊಸದಾಗಿ ಸೋಂಕು ದೃಢಪಟ್ಟಿದ್ದು, ಇದುವರೆಗೆ ಸೋಂಕಿತರಾದವರ ಸಂಖ್ಯೆ 3,688ಕ್ಕೆ ತಲುಪಿದೆ. ಬೆಳಗಾವಿ ತಾಲ್ಲೂಕಿನ 38, ರಾಯಬಾಗ 1, ಬೈಲಹೊಂಗಲ 6, ರಾಮದುರ್ಗ 1 ಚಿಕ್ಕೋಡಿ 4, ಗೋಕಾಕ 1, ಖಾನಾಪುರ 8 ಹಾಗೂ ಹುಕ್ಕೇರಿಯಲ್ಲಿ 1 ಪ್ರಕರಣಗಳು ದೃಢಪಟ್ಟಿವೆ.

ಇದುವರೆಗೆ 1,080 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.  868 ಜನರ ಗಂಟಲು ದ್ರವ ಮಾದರಿಗಳ ಫಲಿತಾಂಶ ಬರಬೇಕಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು