ರಾಮದುರ್ಗ: ರಾಮದುರ್ಗ ತಾಲ್ಲೂಕಿನ ಸಾಲಾಪೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸಂಗನಗೌಡ ನ್ಯಾಮಗೌಡ ಬಲ್ಬ್ ನಲ್ಲಿ ರಾಷ್ಟ್ರ ಧ್ವಜ, ಪ್ರಾಣಿ, ಮಹಾತ್ಮ ಗಾಂಧಿ ಅವರ ಚಿತ್ರಗಳನ್ನು ಅಳವಡಿಸಿ ಬಲ್ಬ್ ಉರಿಯುವಂತೆ ಮಾಡಿ ಜನರ ಗಮನ ಸೆಳೆದಿದ್ದಾನೆ.
ಸಂಗನಗೌಡ, ತಮ್ಮ ಮುತ್ತಾತ ಮುರುಗೆಪ್ಪ ನಾಯಕ ಅವರ ಮಾರ್ಗದರ್ಶನದಲ್ಲಿ ನಿರಂತರ ಎರಡು ವಾರ ಕೆಲಸ ಮಾಡಿ ವಿಸ್ಮಯ ನಿರ್ಮಿಸಿದ್ದಾನೆ.