ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಶಾಖೆ ಸ್ಥಳಾಂತರಕ್ಕೆ‌ ವಿರೋಧ

Last Updated 14 ಸೆಪ್ಟೆಂಬರ್ 2020, 13:28 IST
ಅಕ್ಷರ ಗಾತ್ರ

ಅಂಕಲಗಿ: ಸಮೀಪದ ಅಕ್ಕತಂಗೇರಹಾಳ ಗ್ರಾಮದಲ್ಲಿರುವ ಕೆ.ವಿ.ಜಿ. ಬ್ಯಾಂಕ್ ಶಾಖೆಯನ್ನು ಅಂಕಲಗಿ ಶಾಖೆಯೊಂದಿಗೆ ವಿಲೀನಗೊಳಿಸುವ ಕ್ರಮ ಖಂಡಿಸಿ ಗ್ರಾಹಕರು ಸೋಮವಾರ ಪ್ರತಿಭಟನೆ ನಡೆಸಿದರು.

‘ಗ್ರಾಹಕರ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ಕಾರಣದಿಂದ 7ಸಾವಿರಕ್ಕೂ ಅಧಿಕ ಜನರಿರುವ ಈ ಗ್ರಾಮದಿಂದ ಶಾಖೆ ಸ್ಥಳಾಂತರಿಸಬಾರದು. ಗ್ರಾಮೀಣರ ಆರ್ಥಿಕ ಬಲವರ್ಧನೆಗೆ ಶ್ರಮಿಸುವ ಸಂಸ್ಥೆ ಇದಾಗಬೇಕು. ಇರುವ ಬ್ಯಾಂಕ್‌ ಕೂಡ ಹೋದರೆ ನಮಗೆ ಸಮಸ್ಯೆಯಾಗುತ್ತದೆ’ ಎಂದು ತಿಳಿಸಿದರು.

ಮನವಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ವ್ಯವಸ್ಥಾಪಕ ಜಾನಕಿರಾಮ ತಿಳಿಸಿದರು.

ರವಿ ಭಡಕಲ್, ಮಲ್ಲಿಕಾರ್ಜುನ ನಾಯಿಕ, ಶಂಕರ ಬೆಣ್ಣಿ, ಬಾಳಪ್ಪ ದಡ್ಡಿ, ಸಂತೋಷ‌ ಈಶ್ವರಪ್ಪಗೋಳ, ಶಂಕರ ತುಪ್ಪದ, ಸುರೇಶ ಸತ್ತಿಗೇರಿ, ರಾಜು ಬೆಣ್ಣಿ, ಶಿವಪುತ್ರಪ್ಪ ತುಪ್ಪದ, ಸತ್ಯಪ್ಪ ಪಂಗಣ್ಣವರ, ಜಾಫರ ದೇಸಾಯಿ, ರಾಜು ಪಾಟೀಲ, ಶಿವನಪ್ಪ ಕುಂದರಗಿ, ಶಿಂಗಪ್ಪ ಪಾಟೀಲ, ಬಸನಗೌಡ ಮಾವನೂರ, ಶಿವನಗೌಡ ಮಾನಗಾವ, ಬಾಳಪ್ಪ ಪೂಜೇರಿ, ಬಸಪ್ಪ ಹೆಬ್ಬಾಳ, ಚಂದ್ರು ಶೆಟ್ಟೆಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT