ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಖಾನಾಪುರ | ‘ದಹಿ-ಹಂಡಿ’ ಕಾರ್ಯಕ್ರಮ ಸಂಪನ್ನ

Published : 28 ಆಗಸ್ಟ್ 2024, 15:24 IST
Last Updated : 28 ಆಗಸ್ಟ್ 2024, 15:24 IST
ಫಾಲೋ ಮಾಡಿ
Comments

ಖಾನಾಪುರ: ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆಯ ಸಭಾಗೃಹದಲ್ಲಿ ಬುಧವಾರ ಇನ್ನರ್ ವ್ಹೀಲ್ ಕ್ಲಬ್ ಆಫ್ ಖಾನಾಪುರ ಮತ್ತು ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ದಹಿ-ಹಂಡಿ‘ (ಮೊಸರಿನ ಗಡಿಗೆ ಒಡೆಯುವ) ಕಾರ್ಯಕ್ರಮ ಸಂಪನ್ನಗೊಂಡಿತು.

ಶಾಲೆಯ ನರ್ಸರಿಯಿಂದ ಪ್ರಾಥಮಿಕ ಶಾಲೆಯವರೆಗಿನ ಮಕ್ಕಳು ಕೃಷ್ಣ-ರಾಧಾ ವೇಷಭೂಷಣದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೊಸರಿನ ಗಡಿಗೆ ಒಡೆದು ಸಂಭ್ರಮಿಸಿದರು.

ಕ್ಲಬ್ ವತಿಯಿಂದ ಐತಿಹಾಸಿಕ ಮತ್ತು ಪೌರಾಣಿಕ ವೇಷಭೂಷ ಸ್ಪರ್ಧೆ ಜರುಗಿತು. ವಿಜೇತರಿಗೆ ಬಹುಮಾನ ನೀಡಲಾಯಿತು. ಸ್ವಾಮಿ ವಿವೇಕಾನಂದ ಶಾಲೆಯ ಮುಖ್ಯಾಧ್ಯಾಪಕಿ ಶೃದ್ಧಾ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು. ಕ್ಲಬ್ ಅಧ್ಯಕ್ಷೆ ಶರಯೂ ಕದಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ಲಬ್ ನ ಪದಾಧಿಕಾರಿಗಳು, ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT