ಎಂ.ಕೆ. ಹುಬ್ಬಳ್ಳಿ: ನವರಾತ್ರಿ ಅಂಗವಾಗಿ ಪಟ್ಟಣದಲ್ಲಿ ದುರ್ಗಾ ಮಾತಾ ದೌಡ್ ಭಕ್ತಿ ಸಂಭ್ರಮದಿಂದ ನಡೆಯುತ್ತಿದೆ.
ಒಂಬತ್ತು ದಿನಗಳ ಕಾಲ ನಡೆಯಲಿರುವ ದುರ್ಗಾ ಮಾತಾ ದೌಡ್ ಪಟ್ಟಣದಲ್ಲಿ ಭಕ್ತಿಯ ಜೊತೆಗೆ ಉತ್ಸಾಹ ವೃದ್ಧಿಸಿದೆ. ಅಪಾರ ಸಂಖ್ಯೆಯ ಶ್ವೇತ ವಸ್ತ್ರಧಾರಿಗಳು ಪಾಲ್ಗೊಂಡಿದ್ದರು.
ಪ್ರತಿದಿನ ಪಟ್ಟಣದ ಒಂದೊಂದು ಓಣಿಗಳಲ್ಲಿ ಸಂಚರಿಸುವ ದೌಡ್‌ಗೆ ಅಲ್ಲಿಯ ಜನರು ಭಕ್ತಿಯ ಸ್ವಾಗತ ಕೋರುತ್ತಿದ್ದಾರೆ. ಮನೆಗಳ ಮುಂದೆ ರಂಗೋಲಿ, ಹೂ ಹಾಕಿ, ಪೂಜಿಸಿ ಭಕ್ತಿ ಸಮರ್ಪಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.