ಬುಧವಾರ, ಜನವರಿ 26, 2022
25 °C

ಸುಳೇಭಾವಿ: ದೀಪೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕಾರ್ತೀಕ ಮಾಸದ ನಿಮಿತ್ತ ತಾಲ್ಲೂಕಿನ ಸುಕ್ಷೇತ್ರ ಸುಳೇಭಾವಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ನೆರವೇರಿಸಲಾಯಿತು.

ಮಹಾನಗರ ಪಾಲಿಕೆ ಸದಸ್ಯ ಅಭಿಜಿತ ಜವಳಕರ ಚಾಲನೆ ನೀಡಿದರು. ‘ಕಾರ್ತೀಕ ಮಾಸದಲ್ಲಿ ನಡೆಯುವ ದೀಪೋತ್ಸವ ಎಲ್ಲರ ಬದುಕಿನಲ್ಲೂ ಬೆಳಕು ನೀಡಲಿ. ಕತ್ತಲು ಮರೆಯಾಗಲಿ. ಕೋವಿಡ್ ಸಂಕಷ್ಟದಿಂದ ಎಲ್ಲರೂ ಹೊರಬಂದು ಸುಂದರ ಜೀವನ ನಡೆಸುವಂತಾಗಲಿ. ಚೈತನ್ಯ ಮೂಡಲಿ’ ಎಂದು ಪ್ರಾರ್ಥಿಸಿದರು.

ದೇವಸ್ಥಾನದ ಅರ್ಚಕ ರಮೇಶ ಪೂಜೇರಿ ಮಾತನಾಡಿದರು.

ಗ್ರಾಮದಲ್ಲಿ ಮನೆಗಳ ಎದುರು ಆಕರ್ಷಕ ರಂಗೋಲಿಗಳನ್ನು ಬಿಡಿಸಿದ್ದರು. ದೇವಸ್ಥಾನ ಆವರಣದಲ್ಲಿ ದೀಪಗಳನ್ನು ಹಚ್ಚಲಾಯಿತು. ಮಹಿಳೆಯರಿಂದ ಆರತಿ ಕಾರ್ಯಕ್ರಮ ನಡೆಯಿತು.

ಅರ್ಚಕರಾದ ದ್ಯಾಮಣ್ಣ ಪೂಜೇರಿ, ಭೀಮಶಿ ಪೂಜೇರಿ, ಲಕ್ಷ್ಮಣ ಪೂಜೇರಿ, ಪರುಶರಾಮ ಪೂಜೇರಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು