ಶನಿವಾರ, ಡಿಸೆಂಬರ್ 7, 2019
21 °C

ಷೇರುದಾರರಿಗೆ ಮಾಹಿತಿ ನೀಡಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ‘ಕೃಷ್ಣಾ ಸಕ್ಕರೆ ಕಾರ್ಖಾನೆಯ ಸಭೆಗಳಲ್ಲಿ ನಡೆಯುವ ಚರ್ಚೆಗಳ ಮಾಹಿತಿಯನ್ನು ಷೇರುದಾರರ ಮೊಬೈಲ್‌ ಕಳುಹಿಸಬೇಕು. ದೊರೆಯುವ ಸೌಲಭ್ಯಗಳನ್ನು ಎಲ್ಲರಿಗೂ ತಿಳಿಸಬೇಕು’ ಎಂದು ಒತ್ತಾಯಿಸಿ ಭಾರತೀಯ ಕಿಸಾನ್‌ ಸಂಘ ಅಥಣಿ ಘಟಕದ ಪದಾಧಿಕಾರಿಗಳು ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಅವರಿಗೆ ಮನವಿ ಸಲ್ಲಿಸಿದರು.

‘ಷೇರುದಾರರು ಹಾಗೂ ಬಡವರಿಗೆ ಅನುಕೂಲ ಮಾಡಿಕೊಡಲು ಕಾರ್ಖಾನೆಯಿಂದ ಸಿಬಿಎಸ್‌ಇ ಶಾಲೆ ಸ್ಥಾಪಿಸಬೇಕು. ಷೇರುದಾರರು ಅಪಘಾತದಲ್ಲಿ ಮೃತಪಟ್ಟರೆ ಕುಟುಂಬದವರಿಗೆ ₹ 5ಲಕ್ಷ ಪರಿಹಾರ ನೀಡಬೇಕು. ಕುಟುಂಬದವರಿಗೆ ಆರೋಗ್ಯ ವಿಮೆ ಮಾಡಿಸಿಕೊಡಬೇಕು’ ಎಂದು ಕೋರಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ದಾನಗೌಡರ, ಕಾರ್ಯಾಧ್ಯಕ್ಷ ಭರಮು ನಾಯಕ, ಪುಟ್ಟು ಹಿರೇಮಠ ಇದ್ದರು.

ಪ್ರತಿಕ್ರಿಯಿಸಿ (+)