‘ಕೃಷಿ ಸಹಾಯಕ ಹುದ್ದೆಗಳಿಗೆ ಪರಿಗಣಿಸಿ’

7
ಡಿಪ್ಲೊಮಾ ಪಡೆದವರ ಆಗ್ರಹ

‘ಕೃಷಿ ಸಹಾಯಕ ಹುದ್ದೆಗಳಿಗೆ ಪರಿಗಣಿಸಿ’

Published:
Updated:

ಬೆಳಗಾವಿ: ಕೃಷಿ ಡಿಪ್ಲೊಮಾ ವಿದ್ಯಾರ್ಥಿಗಳನ್ನು ಕೃಷಿ ಸಹಾಯಕ ಹುದ್ದೆಗಳಿಗೆ ಪರಿಗಣಿಸುವಂತೆ ಆಗ್ರಹಿಸಿ ರಾಜ್ಯ ಕೃಷಿ ಡಿಪ್ಲೊಮಾ ಪದವೀಧರರ ಸಂಘದವರು ಶುಕ್ರವಾರ ತಾಲ್ಲೂಕಿನ ಸುವರ್ಣ ವಿಧಾನಸೌಧದ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸಿದರು.

‘ಹೋಬಳಿ, ವಲಯ ಮಟ್ಟದಲ್ಲಿ ಕೃಷಿ ಇಲಾಖೆಯ ವಿವಿಧ ಯೋಜನೆಗಳನ್ನು ರೈತರಿಗೆ ಸಕಾಲಕ್ಕೆ ತಲುಪಿಸಲು ಕೃಷಿ ಸಹಾಯಕರ ಹುದ್ದೆಗಳು ಅತಿ ಅವಶ್ಯವಾಗಿವೆ. ಕೃಷಿ ಹಾಗೂ ಕೃಷಿಗೆ ಪೂರಕವಾದ ವಿಷಯಗಳನ್ನು ಅಭ್ಯಾಸ ಮಾಡಿ ನಿರುದ್ಯೋಗಿಗಳಾಗಿರುವ ಕೃಷಿ ಡಿಪ್ಲೊಮಾ ಪದವೀಧರರನ್ನು ಪರಿಗಣಿಸಬೇಕು. ವೃಂದ ಹಾಗೂ ನೇಮಕಾತಿ ನಿಯಮಾವಳಿಗಳಲ್ಲಿ ತಿದ್ದುಪಡಿ ತಂದು, ಸರ್ಕಾರದ ನೇರ ನೇಮಕಾತಿ ನಿಯಮಗಳ ಅನುಸಾರ ಕೃಷಿ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಈ ಮೂಲಕ 6ಸಾವಿರಕ್ಕೂ ಹೆಚ್ಚುಅಭ್ಯರ್ಥಿಗಳ ಹಿತ ಕಾಪಾಡಬೇಕು’ ಎಂದು ಆಗ್ರಹಿಸಿದರು.

‘ಕೃಷಿ ಡಿಪ್ಲೊಮಾವನ್ನು 10+2 ವಿದ್ಯಾರ್ಹತೆ ಎಂದು ಪರಿಗಣಿಸಿ, ಪಿಯುಸಿ ಮೇಲೆ ಕರೆಯುವ ಹುದ್ದೆಗಳಿಗೆ ಅರ್ಹತೆ ಒದಗಿಸಬೇಕು. ಬಿ.ಎಸ್ಸಿ ಪದವಿಗೆ ಪ್ರವೇಶ ಪಡೆಯಲು ಶೇ 5ರಷ್ಟು ಇರುವ ಮೀಸಲಾತಿಯನ್ನು ಶೇ 25ಕ್ಕೆ ಹೆಚ್ಚಿಸಬೇಕು. ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ನಮ್ಮನ್ನು ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಮಹಾಂತೇಶ ಕುಂಟೋಜಿ, ಗೌರವಾಧ್ಯಕ್ಷ ಶಿವಕುಮಾರ ಯಾದವ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಬುದ್ನಿ ನೇತೃತ್ವ ವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !