ಕೆಲಸ ಮುಗಿದಿದೆಯೇ ಸಾಬೀತುಪಡಿಸಲಿ: ಕತ್ತಿ

7

ಕೆಲಸ ಮುಗಿದಿದೆಯೇ ಸಾಬೀತುಪಡಿಸಲಿ: ಕತ್ತಿ

Published:
Updated:
Deccan Herald

ಬೆಳಗಾವಿ: ‘ಕೆ–ಶಿಪ್ ಕಚೇರಿಗಳ ಸ್ಥಳಾಂತರ ಸಮರ್ಥಿಸಿಕೊಂಡಿರುವ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ, ಈ ಭಾಗದಲ್ಲಿ ಹೆದ್ದಾರಿ ಅಭಿವೃದ್ಧಿ ಯೋಜನೆಗಳು ಪೂರ್ಣಗೊಂಡಿವೆಯೇ ಎನ್ನುವುದನ್ನು ಸಾಬೀತುಪಡಿಸಲಿ, ದಾಖಲೆಗಳನ್ನು ಬಿಡುಗಡೆ ಮಾಡಲಿ’ ಎಂದು ಬಿಜೆಪಿ ಶಾಸಕ ಉಮೇಶ ಕತ್ತಿ ಸವಾಲು ಹಾಕಿದರು.

ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದ ಬಳಿ ಭಾನುವಾರ ಬಾಗಿನ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಕೆ–ಶಿಪ್ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರಿಸಿರುವ ಆದೇಶ ಕೈಬಿಡಬೇಕು. ಇತರ ಪ್ರಮುಖ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು’ ಎಂದು ಒತ್ತಾಯಿಸಿದರು.

‘ಈ ಬಾರಿಯ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ವಿಷಯದಲ್ಲಿ ಬಿಜೆಪಿಯವರಿಗೆ ಕಾಮಾಲೆ ಕಣ್ಣು ಎನ್ನುವುದು ಸರಿಯಲ್ಲ. ಹೀಗಾಗಿಯೇ ಈ ಭಾಗದ ಸ್ವಾಮೀಜಿಗಳು ಪ್ರತಿಭಟನೆ ನಡೆಸಿದ್ದಾರೆ. ಮತ್ತೆ ಅನ್ಯಾಯ ಮುಂದುವರಿದರೆ ಸಹಿಸಲಾಗದು’ ಎಂದು ಹೇಳಿದರು.

‘ಸುವರ್ಣ ವಿಧಾನಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರಿಸಲು ಸ್ಥಳಾವಕಾಶದ ಕೊರತೆ ಇಲ್ಲ. ಸುಮ್ಮನೆ ನೆಪ ಹೇಳುವುದು ಸರಿಯಲ್ಲ’ ಎಂದರು.

‘ರಾಜ್ಯದ ಬೊಕ್ಕಸಕ್ಕೆ ಬಹಳಷ್ಟು ಆದಾಯವನ್ನು ಉತ್ತರ ಕರ್ನಾಟಕ ನೀಡುತ್ತಿದೆ. ನಾವು ಅಖಂಡ ಕರ್ನಾಟಕ ಪರ ಇದ್ದೇವೆ. ಅನ್ಯಾಯ ಮುಂದುವರಿದರೆ ಹೋರಾಟ ಅನಿವಾರ್ಯ. ರಾಜ್ಯ ವಿಭಜನೆ ಮಾಡಲು ಸರ್ಕಾರ ಸಿದ್ಧವಿದ್ದರೆ, ನಾವೂ ಸಿದ್ಧವಿದ್ದೇವೆ. ವಿಭಜನೆ ಆಗಬೇಕು ಎನ್ನುವುದು ನಮ್ಮ ಉದ್ದೇಶವಲ್ಲ’ ಎಂದು ಸ್ಪಷ್ಟಪಡಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !