ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಯೋಜನೆಗೆ ರೈತರ ಆಗ್ರಹ

Last Updated 25 ಸೆಪ್ಟೆಂಬರ್ 2021, 9:00 IST
ಅಕ್ಷರ ಗಾತ್ರ

ಕಕಮರಿ: ‘ಅಥಣಿ ತಾಲ್ಲೂಕಿನ ಪೂರ್ವ ಗಡಿ ಭಾಗದ ಗ್ರಾಮಗಳ ರೈತರ ನೆರವಿಗಾಗಿ ಅಮ್ಮಾಜೇಶ್ವರಿ (ಕಕಮರಿ) ಏತ ನೀರಾವರಿ ಯೋಜನೆ ಮಂಜೂರಾತಿ ಮಾಡಬೇಕು’ ಎಮದು ಭಾರತೀಯ ಕಿಸಾನ್ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಶೈಲ ಜನಗೌಡ ಒತ್ತಾಯಿಸಿದರು.

ಇಲ್ಲಿ ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನೀರಾವರಿ ವಂಚಿತ ಕಕಮರಿ, ಕನ್ನಾಳ, ತೆಲಸಂಗ, ಪಡತರವಾಡಿ, ಹಾಲಳ್ಳಿ, ಅರಟಾಳ, ಬನ್ನೂರ, ರಾಮತೀರ್ಥ, ಕೊಟ್ಟಲಗಿ, ಐಗಳಿ ಗ್ರಾಮಗಳ ಒಟ್ಟು 22,500 ಹೆಕ್ಟರ್ ಜಮೀನುಗಳಿಗೆ ನೀರು ಒದಗಿಸುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

‘ಯೋಜನೆ ಮಂಜೂರಾತಿಗಾಗಿ ಸರಕಾರಕ್ಕೆ ಪತ್ರಗಳ ಮೂಲಕ ಆಗ್ರಹಿಸಲಾಗಿತ್ತು. ಆದರೆ, ಸರ್ಕಾರಗಳಿಂದ ಸ್ಪಂದನೆ ಸಿಗಲಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹಿಂದಿನ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸ್ಪಂದಿಸಿದ್ದರು. ಇನ್ನೇನು ಮಂಜೂರಾತಿ ಸಿಗುತ್ತದೆ ಎಂದು ಭಾವಿಸಿದ್ದೆವು. ಆದರೆ, ನನೆಗುದಿಗೆ ಬಿದ್ದಿದೆ’ ಎಂದು ತಿಳಿಸಿದರು.

‘ಸರ್ಕಾರ ಆದಷ್ಟು ಬೇಗನೆ ಈ ನೀರಾವರಿ ಯೋಜನೆಗೆ ಅನುಮೋದನೆ ಕೊಟ್ಟು, ಚಾಲನೆ ನೀಡಬೇಕು’ ಎಂದರು.

ಕಾರ್ಯದರ್ಶಿ ಭರಮಾ ನಾಯಿಕ, ಆನಂದ ಬಿರಾದಾರ, ಅದನಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT