ಮಂಗಳವಾರ, ಸೆಪ್ಟೆಂಬರ್ 21, 2021
29 °C

ಆನಂದ ಮಾಮನಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆನಕಟ್ಟಿ (ಬೆಳಗಾವಿ ಜಿಲ್ಲೆ): ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಮಬನೂರ, ಮದ್ಲೂರ ಹಾಗೂ ಬೆನಕಟ್ಟಿ ಗ್ರಾಮದ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಬಳಗದವರು ಇಲ್ಲಿನ ರಾಜ್ಯ ಹೆದ್ದಾರಿ ಬಂದ್ ಮಾಡಿ ಗುರುವಾರ ಪ್ರತಿಭಟಿಸಿದರು.

ಬಿಜೆಪಿ ಮುಖಂಡ ಅಡಿವೆಪ್ಪ ಶಿರಸಂಗಿ, ‘ಸತತ ಮೂರು ಬಾರಿ ಗೆದ್ದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಅವರ ಪ್ರಯತ್ನದಿಂದ ಕ್ಷೇತ್ರದ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಆಡಳಿತವಿದೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಿ ಮತ್ತಷ್ಟು ಅಭಿವೃದ್ಧಿಪಡಿಸಲು ಶಕ್ತಿ ತುಂಬಬೇಕು’ ಎಂದರು.

ಮಬನೂರದ ಮುಖಂಡ ಮಹಾದೇವ ಮುರಗೋಡ, ಅಶೋಕ ಬಡಿಗೇರ ಮಾತನಾಡಿದರು. ಬಿಜೆಪಿ ಮುಖಂಡ ಪುಂಡಲೀಕ ಮೇಟಿ, ಎಪಿಎಂಸಿ ಅಧ್ಯಕ್ಷ ಪ್ರಕಾಶ ನರಿ, ಅಜಯ ಕುಸಲಿ, ಬೀರಪ್ಪ ಕುರಿ, ಪಂಚಪ್ಪ ಮಾತಾರಿ, ಈರಯ್ಯ ಹಿರೇಮಠ, ಪ್ರಕಾಶ ಸಾವಳಗಿ, ಅಶೋಕ ಯರಝರ್ವಿ, ಕಾಡಪ್ಪ ವೀರಶೆಟ್ಟಿ, ಬಾಬು ಪರಾಶಿ, ಬಸವರಾಜ ಸುಣಗಾರ, ಫಕೀರಪ್ಪ ಟಪಾಲ, ಎಂ.ಬಿ. ಕಲಕುಟ್ರಿ, ಮಾಯಪ್ಪ ಚೂರಿ, ಬಸಪ್ಪ ನೇಗಿನಾಳ, ಮತ್ತೆಪ್ಪ ಮೇಟಿ, ನಾಗಪ್ಪ ರೈನಾಪೂರ, ಮರೆಪ್ಪ ಸಾವಳಗಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು