ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ದೇವಗಾಂವ ಗ್ರಾಮದಲ್ಲಿ ಬುಧವಾರ ವ್ಯಕ್ತಿಯೊಬ್ಬರ ತಲೆ ಮೇಲೆ ದೊಡ್ಡ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.

ಮಹಾಂತೇಶ ನಿಂಗಪ್ಪ ಹಚ್ಚಣ್ಣವರ (52) ಕೊಲೆಯಾದ ವ್ಯಕ್ತಿ. ಆರೋಪಿ ಪ್ರಕಾಶ ಕಲ್ಲಪ್ಪ ಕಾಳಾರ (30)ನನ್ನು ಪೊಲೀಸರು ಬಂಧಿಸಿದ್ದಾರೆ.

‘ಪ್ರಕಾಶ ಕಾಳಾರ ಒಬ್ಬನೇ ಮನೆಯಲ್ಲಿ ವಾಸವಾಗಿದ್ದ. ಅವನಿಲ್ಲದ ವೇಳೆ ಮಹಾಂತೇಶ ಹೋಗಿ ಅಲ್ಲಿ ಮಲಗಿದ್ದ. ಮನೆಗೆ ಬಂದ ಪ್ರಕಾಶ ಇಲ್ಲೇಕೆ ಮಲಗಿದ್ದಿ ಎಂದು ಕೇಳಿದ. ಮಾತಿಗೆ ಮಾತು ಬೆಳೆಯಿತು. ಜಗಳ ವಿಕೋಪಕ್ಕೆ ಹೋಗಿದೆ. ಹತ್ತಿರದಲ್ಲಿ ಬಿದ್ದಿದ್ದ ಕಲ್ಲನ್ನು ತಂದು ತಲೆಯ ಮೇಲೆ ಒಗೆದ. ತೀವ್ರ ಗಾಯಗೊಂಡ ಆತ ಸ್ಥಳದಲ್ಲೇ ಮೃತಪಟ್ಟ. ಮನೆಯಲ್ಲಿಯೇ ಕೊಂದು ನಂತರ ಮೃತದೇಹವನ್ನು ಎಳೆದು ತಂದು ರಸ್ತೆಗೆ ಹಾಕಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎಸ್ಐ ಪ್ರವೀಣ ಗಂಗೋಳ ಪ್ರಕರಣ ದಾಖಲಿಸಿದ್ದಾರೆ. ಸಿಪಿಐ ಶಿವಾನಂದ ಗುಡಗನಟ್ಟಿ ತನಿಖೆ ಕೈಗೊಂಡಿದ್ದಾರೆ. ದೇವಗಾಂವ ಸೇರಿ ಐದು ಗ್ರಾಮಗಳ ಗ್ರಾಮದೇವತೆಯ ಜಾತ್ರೆ ಸಂದರ್ಭದಲ್ಲಿಯೇ ಕೊಲೆಯಾಗಿರುವುದು ಗ್ರಾಮಸ್ಥರ ಕಳವಳಕ್ಕೆ ಕಾರಣವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-21-1465299164

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.