ಸೋಮವಾರ, ಆಗಸ್ಟ್ 26, 2019
21 °C

ಆರ್‌ಸಿಯು ಅಭಿವೃದ್ಧಿಗೆ ಪ್ರಥಮ ಆದ್ಯತೆ: ಕುಲ‍ಪತಿ

Published:
Updated:
Prajavani

ಬೆಳಗಾವಿ: ‘ಕೌಶಲ ಆಧಾರಿತ ಹೊಸ ಕೋರ್ಸ್‌ಗಳ ಆರಂಭದೊಂದಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು’ ಎಂದು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ತಿಳಿಸಿದರು.

ವಿಶ್ವವಿದ್ಯಾಲಯದ ಸ್ನಾತಕೋತ್ತರ ಶಿಕ್ಷಕ ಸಂಘದಿಂದ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಲ್ಲಿ ಅಭಿವೃದ್ಧಿ ಕಾರ್ಯಕ್ರಮ ಕೈಗೊಂಡ ಹಾಗೂ ಮೂಲಸೌಲಭ್ಯ ಒದಗಿಸಿದ ಬಳಿಕ ಸನ್ಮಾನ ಸ್ವೀಕರಿಸುತ್ತೇನೆ’ ಎಂದರು.

ಸಂಘದ ಅಧ್ಯಕ್ಷ ಪ್ರೊ.ಡಿ.ಎನ್. ಪಾಟೀಲ, ಪ್ರೊ.ಎಸ್.ಬಿ ಆಕಾಶ್, ಕುಲಸಚಿವರಾದ ಪ್ರೊ.ಬಸವರಾಜ ಪದ್ಮಶಾಲಿ, ಪ್ರೊ.ರಂಗರಾಜ ವನದುರ್ಗ, ಹಣಕಾಸು ಅಧಿಕಾರಿ ಶಂಕರಾನಂದ ಬನಶಂಕರಿ ಮಾತನಾಡಿದರು.

ಡಾ.ಶೋಭಾ ನಾಯಕ ನಿರೂಪಿಸಿದರು. ಡಾ.ಅಶೋಕ ಡಿಸೋಜಾ ವಂದಿಸಿದರು.

Post Comments (+)