ಬುಧವಾರ, ನವೆಂಬರ್ 20, 2019
21 °C

ರಂಗಾಯಣ ನಿರ್ದೇಶಕರ ವಜಾ ನಿಯಮಬದ್ಧವಲ್ಲ: ನಾಟಕಕಾರ ಡಾ.ಡಿ.ಎಸ್. ಚೌಗಲೆ

Published:
Updated:

ಬೆಳಗಾವಿ: ‘ಎಲ್ಲ ರಂಗಾಯಣಗಳ ನಿರ್ದೇಶಕರನ್ನು ವಜಾಗೊಳಿಸಿರುವುದು ನಿಯಮಬದ್ಧವಾದುದಲ್ಲ. ಮುಖ್ಯಮಂತ್ರಿ ಮಧ್ಯಪ್ರವೇಶಿಸಿ‌ ವಜಾ ಆದೇಶ ಹಿಂಪಡೆಯಬೇಕು’ ಎಂದು ನಾಟಕಕಾರ ಡಾ.ಡಿ.ಎಸ್. ಚೌಗಲೆ ಆಗ್ರಹಿಸಿದ್ದಾರೆ.

‘ರಂಗಾಯಣವು ಸ್ವಾಯತ್ತ ಸಂಸ್ಥೆಯಾಗಿದೆ. ಅದಕ್ಕೆ ಅದರದ್ದೇ ಆದ ಬೈಲಾ (ಉಪವಿಧಿ) ಇದೆ. ಸರ್ಕಾರವು ನೇಮಿಸಿದ ರಂಗ ಸಮಾಜದ ಸದಸ್ಯರು ನಿರ್ದೇಶಕರನ್ನು ಅವರ ಪ್ರತಿಭೆ ಹಿನ್ನೆಲೆಯಲ್ಲಿ ಆರಿಸಿದ ನಂತರ ನೇಮಿಸಲಾಗಿರುತ್ತದೆ. ಆ ನಿರ್ದೇಶಕ ಅಥವಾ ರಂಗಕರ್ಮಿ ಯಾವುದೇ ಪಕ್ಷಕ್ಕೆ ಸಂಬಂಧಿಸಿದವರಲ್ಲ. ಆತ ಒಬ್ಬ ಸಾಂಸ್ಕೃತಿಕ ರಾಯಭಾರಿ. ಜನರ ದನಿಯಾಗಿ ರಂಗಾಭಿವ್ಯಕ್ತಿ ಮಾಡುತ್ತಿರುತ್ತಾನೆ. ಅಂಥವರನ್ನು ಹೀಗೆ ವಜಾಗೊಳಿಸುವುದು ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗುತ್ತದೆ. ಇದನ್ನು ಮರುಪರಿಶೀಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)