ಬೆಳಗಾವಿ: ‘ಈ ಬಾರಿ ಬಜೆಟ್ನಲ್ಲಿ ಬೆಳಗಾವಿ ಜಿಲ್ಲೆಯ ವಿಭಜನೆ ಘೋಷಣೆ ಆಗಲಿದೆ’ ಎಂಬ ಸುದ್ದಿ ಜಿಲ್ಲೆಯಲ್ಲಿ ಹರಿದಾಡುತ್ತಿದೆ. ಆದರೆ, ಯಾವುದೇ ಅಧಿಕೃತ ಮೂಲ ಇದನ್ನು ಖಚಿತಪಡಿಸಿಲ್ಲ.

‘ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಬೈಲಹೊಂಗಲ ಕೇಂದ್ರವಾಗಿ ಹೊಸ ಜಿಲ್ಲೆ ರಚಿಸಬೇಕು’ ಎಂದು ಜಿಲ್ಲಾ ಹೋರಾಟ ಸಮಿತಿ ಮನವಿ ಮಾಡಿದೆ. ಅದೇ ರೀತಿ ಅಥಣಿ ಕೇಂದ್ರವಾಗಿ ಹೊಸ ಜಿಲ್ಲೆ ಮಾಡಬೇಕೆಂದು ಇನ್ನೊಂದು ಹೋರಾಟ ಸಮಿತಿ ಆಗ್ರಹಿಸಿದೆ. ಸಂಕೇಶ್ವರವನ್ನು ತಾಲ್ಲೂಕು ಕೇಂದ್ರ ಮಾಡುವಂತೆ ಮನವಿ ಬಂದಿವೆ. ಇವೆಲ್ಲವೂ ಜನತಾ ದರ್ಶನದಲ್ಲಿ ಸಲ್ಲಿಕೆಯಾದ ಮನವಿಗಳು. ಇವುಗಳ ಪಟ್ಟಿ ಸಿದ್ಧಪಡಿಸಿ ಆಯಾ ಇಲಾಖೆಯ ಅಧಿಕಾರಿಗಳಿಗೆ ಪತ್ರ ರವಾನೆ ಮಾಡುವುದು ನಿಯಮಾವಳಿ. ಅದರಂತೆಯೇ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಇದರ ಪತ್ರ ಬಂದಿದೆ. ಆದರೆ, ಇದು ಜಿಲ್ಲೆಯ ವಿಭಜನೆ ಕುರಿತು ಸರ್ಕಾರ ಕೇಳಿದ ಮಾಹಿತಿ ಅಲ್ಲ’ ಎಂದು ಅಧಿಕಾರಿಗಳು ಖಚಿತಡಿಸಿದ್ದಾರೆ.

ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ 2023ರ ನವೆಂಬರ್ 13ರಂದು ಈ ಪತ್ರ ಬಂದಿದೆ.

‘ಹೊಸ ಜಿಲ್ಲೆ, ತಾಲ್ಲೂಕು ಅಥವಾ ಗ್ರಾಮ ಪಂಚಾಯಿತಿಗಳ ರಚನೆ ಕುರಿತು ಪರಿಶೀಲಿಸಬೇಕು. ವಾಸ್ತವಾಂಶಗಳ ಮಾಹಿತಿ ಸಂಗ್ರಹಿಸಬೇಕು. ಜಿಲ್ಲಾ ಕೇಂದ್ರದಿಂದ ಇರುವ ದೂರ, ಜನರ ಅನಿಸಿಕೆ ಮುಂತಾದ ವಿವರ ನೀಡಬೇಕು’ ಎಂದು ಈ ಪತ್ರದ ಮೂಲಕ ಕೇಳಲಾಗಿದೆ. ಇದು ಕೂಡ ಸರ್ಕಾರದ ನಿಯಮಾವಳಿ. ಅದೇ ಪತ್ರವನ್ನು ಆಧರಿಸಿ ಹೊಸ ಜಿಲ್ಲೆ ರಚನೆಯ ಚಟುವಟಿಕೆಗಳು ಬಿರುಸುಗೊಂಡಿವೆ ಎಂಬ ಸುದ್ದಿ ಹರಿದಾಡುತ್ತಿದೆ.

ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ರಾಜ್ಯ ಸರ್ಕಾರ ಅಥವಾ ರಾಜ್ಯಪಾಲರ ಕಚೇರಿಯು ನಮ್ಮಿಂದ ಯಾವುದೇ ಮಾಹಿತಿ ಕೇಳಿಲ್ಲ. ಹೊಸ ಜಿಲ್ಲೆ ರಚನೆ ಮಾಡಬೇಕು ಎಂದು ಹೋರಾಟ ಸಮಿತಿಗಳು ಮನವಿ ಸಲ್ಲಿಸಿವೆ.
–ನಿತೇಶ್ ಪಾಟೀಲ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.