ರಾಯಬಾಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮೇಖಳಿ ಗ್ರಾಮದಲ್ಲಿ ಸರ್ಕಾರಿ ಗಾಯರಾಣ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ತಹಶೀಲ್ದಾರ್ ಸುರೇಶ ಮುಂಜೆ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಗುರುವಾರ ತೆರವುಗೊಳಿಸಲಾಯಿತು. ಅತ್ಯಾಚಾರ ಆರೋಪದ ಮೇಲೆ ಬಂಧಿತರಾಗಿರುವ ಹಠಯೋಗಿ ಲೋಕೇಶ್ವರ ಸ್ವಾಮೀಜಿಗೆ ಈ ಕಟ್ಟಡಗಳು ಸೇರಿದ್ದಾಗಿತ್ತು.

‘ಮೇಖಳಿ ಗ್ರಾಮದ ಗಾಯರಾಣ ಸ.ನಂ.225ರಲ್ಲಿ ಒಟ್ಟು 21 ಎಕರೆ 23 ಗುಂಟೆ ಪೈಕಿ ಎಂಟು ಎಕರೆಯಲ್ಲಿ ಸ್ವಾಮೀಜಿ ನಿರ್ಮಿಸಿದ್ದ ಮಠ ಮತ್ತು ಅನ್ನದಾಸೋಹ ಭವನವನ್ನು ಜೆಸಿಬಿ ಮೂಲಕ ತೆರವು ಕಾರ್ಯಾಚಣೆ ನಡೆಸಿ, ಜಮೀನನ್ನು ಇಲಾಖೆ ಸುಪರ್ದಿಗೆ ಪಡೆಯಲಾಗಿದೆ. ಸರ್ಕಾರ ಅನುದಾನ ನೀಡಿದ ನಂತರ ಜಮೀನಿಗೆ ತಂತಿ ಬೇಲಿ ಹಾಕಲಾಗುವುದು’ ಎಂದು ತಹಶೀಲ್ದಾರ ಸುರೇಶ ಮುಂಜೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.