ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯಿಂದ ಸವಾಲು ಎದುರಿಸಿ: ವೈದ್ಯರಿಗೆ ಸಲಹೆ

37ನೇ ವಾರ್ಷಿಕ ಕೆಎಪಿಐಸಿಒಎನ್ ಸಮ್ಮೇಳನ
Last Updated 3 ಜೂನ್ 2019, 14:31 IST
ಅಕ್ಷರ ಗಾತ್ರ

ಬೆಳಗಾವಿ: ‘ವೈದ್ಯರು ಯಾವುದೇ ಸಂದರ್ಭದಲ್ಲೂ ಭೀತಿಗೆ ಒಳಗಾಗದೇ, ವೃತ್ತಿಯಲ್ಲಿ ಎದುರಾಗುವ ಸವಾಲುಗಳನ್ನು ಶಾಂತಿಯಿಂದ ಎದುರಿಸಬೇಕು' ಎಂದು ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದ ತಜ್ಞ ವೈದ್ಯ ಡಾ.ಜೆಮ್‌ಶೆಡ್ ಸೋನವಾಲಾ ಸಲಹೆ ನೀಡಿದರು.

ಇಲ್ಲಿನ ಜವಾಹರಲಾಲ್‌ ನೆಹರೂ ವೈದ್ಯಕೀಯ ಕಾಲೇಜಿನ ಮೆಡಿಸಿನ್ ವಿಭಾಗದಿಂದ ಈಚೆಗೆ ಆಯೋಜಿಸಿದ್ದ 37ನೇ ವಾರ್ಷಿಕ ಕೆಎಪಿಐಸಿಒಎನ್–19 ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.‌

‘ತೀವ್ರ ನಿಗಾ ಘಟಕದಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಬಿರುಗಾಳಿಯ ಮಧ್ಯದಲ್ಲಿ ನಿಂತಿರುತ್ತಾರೆ. ಈ ಸಂದರ್ಭದಲ್ಲಿ ಹಲವು ಕಠಿಣ ಪರಿಸ್ಥಿತಿ ನಿಭಾಯಿಸಬೇಕಾಗುತ್ತದೆ. ಎಲ್ಲವನ್ನೂ ತಾಳ್ಮೆಯಿಂದ ನಿರ್ವಹಿಸಬೇಕು’ ಎಂದರು.

‘ಸದಾ ರೋಗಿಯ ಸೇವೆಯಲ್ಲಿರುವ ವೈದ್ಯರು, ವೈದ್ಯಕೀಯ ಸಮಸ್ಯೆಗಳಿಗೆ ಎದೆಗುಂದಬಾರದು. ವೈದ್ಯ ವೃತ್ತಿಯನ್ನು ಗೌರವಿಸುತ್ತಲೇ ಪ್ರಾಮಾಣಿಕವಾಗಿ ಸೇವೆ ನೀಡಬೇಕು. ಯುವ ವೈದ್ಯರು ಅತ್ಯಂತ ಶಾಂತವಾಗಿ ಚಿಕಿತ್ಸೆ ನೀಡುತ್ತಾ ಕಾರ್ಯನಿರ್ವಹಿಸಬೇಕು. ರೋಗಿ ಮತ್ತು ವೈದ್ಯರ ನಡುವಿನ ಸಂಬಂಧ ಚೆನ್ನಾಗಿದ್ದರೆ ಬಹಳ ಒಳ್ಳೆಯದು. ಇದರಿಂದ ರೋಗದ ತೀವ್ರತೆಯನ್ನು ಅರಿಯಬಹುದು; ಸೂಕ್ತ ಚಿಕಿತ್ಸೆ ನೀಡಿ ಸಮಸ್ಯೆ ಪರಿಹರಿಸಬಹುದು’ ಎಂದು ಅಭಿಪ್ರಾಯಪಟ್ಟರು.

‘ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಕ್ಯಾಂಪಸ್ ಅತ್ಯಂತ ಸುಂದರವಾಗಿದೆ. ಸ್ವಚ್ಛತೆ ಕಾಪಾಡಿಕೊಂಡಿರುವುದು, ತಜ್ಞ ವೈದ್ಯರಿರುವುದು, ಕಲಿಕಾ ಸೌಲಭ್ಯ ಉತ್ತಮವಾಗಿರುವುದು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಟ್ಟಿದೆ. ಈ ನಿಟ್ಟಿನಲ್ಲಿ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಕಾರ್ಯ ಶ್ಲಾಘನೀಯ’ ಎಂದರು.

ವೈದ್ಯಕೀಯ ಕ್ಷೇತರ್ದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಡಾ.ಜೆಮ್‌ಶೆಡ್ ಸೋನವಾಲ, ಬೆಂಗಳೂರಿನ ಡಾ.ಚಿಕ್ಕಮಗ, ಡಾ.ಪ್ರಭಾ ಅಧಿಕಾರಿ, ಬೆಳಗಾವಿಯ ಮಧುಮೇಹ ತಜ್ಞ ವೈದ್ಯ ಡಾ.ಎಂ.ವಿ. ಜಾಲಿ ಅವರನ್ನು ಸತ್ಕರಿಸಿಲಾಯಿತು.

ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಕುಲಪತಿ ಡಾ.ವಿವೇಕ ಸಾವೋಜಿ ಅವರು ಮೂರ್ಚೆರೋಗದ ಪುಸ್ತಕ, ಡಾ.ವಿ.ಡಿ. ಪಾಟೀಲ ಅವರು ಸ್ಮರಣಿಕೆಯನ್ನು ಬಿಡುಗಡೆ ಮಾಡಿದರು. ಹುಬ್ಬಳ್ಳಿಯ ಡಾ.ಜಿ.ಜಿ. ಸತ್ತೂರ ಮಾತನಾಡಿದರು.

ಡಾ.ಎನ್.ಎಸ್. ಮಹಾಂತಶೆಟ್ಟಿ, ಡಾ.ಎ.ಎ. ಪಾಂಗಿ, ಡಾ.ನಾಗರಾಜ, ಡಾ.ಸ್ವಾಮಿ, ಡಾ.ರಮೇಶ, ಡಾ.ಎಚ್‌.ಬಿ. ರಾಜಶೇಖರ, ಡಾ.ಮಾಧವ ಪ್ರಭು, ಡಾ.ಆರತಿ ದರ್ಶನ ಇದ್ದರು.

ಡಾ.ವಿ.ಎ. ಕೋಠಿವಾಲೆ ಸ್ವಾಗತಿಸಿದರು. ಡಾ.ರೇಖಾ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT