ಬೆಳಗಾವಿ: ‘ಪೊಲೀಸ್ ಮತ್ತು ರಕ್ಷಣಾ ಪಡೆಗಳಲ್ಲಿ ಶ್ವಾನದಳ, ವಿಧ್ವಂಸಕ ಕೃತ್ಯ ತಪಾಸಣೆ ತಂಡ, ವಿಲೇವಾರಿ ದಳ ಪ್ರಮುಖ ಘಟಕಗಳಾಗಿವೆ. ಇವುಗಳಿಂದ ಅದೆಷ್ಟೋ ಆಪತ್ತು ದೂರವಾಗಿವೆ’ ಎಂದು ನಗರ ಪೊಲೀಸ್ ಆಯುಕ್ತಾಲಯದ ಉಪ ಮೀಸಲು ಪೊಲೀಸ್ ನಿರೀಕ್ಷಕ ವಿಠ್ಠಲ ಗೊರಬಾಲ ಹೇಳಿದರು.

ಇಲ್ಲಿನ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ ವಿಭಾಗದ ವತಿಯಿಂದ ‘ಡಾಗ್ ಸ್ಕ್ವಾಡ್ ಹಾಗೂ ಬಾಂಬ್ ಸ್ಕ್ವಾಡ್ ಕಾರ್ಯವಿಧಾನ’ ಕುರಿತು ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾಗ್ ಸ್ಕ್ವಾಡ್ ಮೂಲಕ ಅಪರಾಧಿಗಳು ಮತ್ತು ನಿಷೇಧಿತ ವಸ್ತು ಪತ್ತೆ ಹಚ್ಚುವುದು, ಸ್ಫೋಟಕ ವಸ್ತು ಗುರುತಿಸುವುದು, ಅಪರಾಧ ಸ್ಥಳದಲ್ಲಿ ಸಾಕ್ಷ್ಯಗಳನ್ನು ಪತ್ತೆ ಮಾಡುವುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.

ಉಪ ಪ್ರಾಚಾರ್ಯ ಪ್ರೊ.ಅರ್ಜುನ ಜಂಬಗಿ ಅಧ್ಯಕ್ಷತೆ ವಹಿಸಿದ್ದರು. ಅಪರಾಧ ಶಾಸ್ತ್ರ ಮತ್ತು ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಚಿದಾನಂದ ಹಾರೂಗೇರಿ, ಮುಕುಂದ ಮುಂಡರಗಿ ಇದ್ದರು. ಯೋಗೇಶ ಕಾಂಬಳೆ ವಂದಿಸಿದರು. ಸಹಾನಾ ನರಗುಂದ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.