ಟಿಕೆಟ್‌ ಕೈತಪ್ಪಿದ್ದಕ್ಕೆ ಅಸಮಾಧಾನ ಇಲ್ಲ, ಪಕ್ಷ ಬಿಡಲ್ಲ: ರಮೇಶ ಕತ್ತಿ

ಮಂಗಳವಾರ, ಏಪ್ರಿಲ್ 23, 2019
31 °C

ಟಿಕೆಟ್‌ ಕೈತಪ್ಪಿದ್ದಕ್ಕೆ ಅಸಮಾಧಾನ ಇಲ್ಲ, ಪಕ್ಷ ಬಿಡಲ್ಲ: ರಮೇಶ ಕತ್ತಿ

Published:
Updated:

ಬೆಳಗಾವಿ: 'ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿರೋದಕ್ಕೆ  ಅಸಮಾಧಾನ ಇಲ್ಲ. ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ' ಎಂದು ರಮೇಶ ಕತ್ತಿ ತಿಳಿಸಿದರು.

ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಎರಡು ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

'ಟಿಕೆಟ್ ಬದಲಾಗಿ, ಬೇರೆ ಯಾವುದೇ ಆಫರ್ ನೀಡಿಲ್ಲ'  ಎಂದು ಹೇಳಿದರು.

'ಸ್ಪರ್ಧಿಸಲು ಬಯಸಿದ್ದು ನಿಜ. ಆದರೆ, ಪಕ್ಷದ ಹೈಕಮಾಂಡ್ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಟಿಕೆಟ್ ನೀಡಿದೆ. ಅವರನ್ನು ಗೆಲ್ಲಿಸಲು ಪ್ರಯತ್ನಿಸುತ್ತೇನೆ. ಟಿಕೆಟ್ ತಪ್ಪಿದಾಗ, ಕಾಂಗ್ರೆಸ್ ಸ್ನೇಹಿತರು ಮಾತನಾಡಿಸಿದ್ದು ನಿಜ. ಆದರೆ, ಪಕ್ಷಕ್ಕೆ  ಆಹ್ವಾನಿಸಿರಲಿಲ್ಲ. ನಾನು ಕೂಡ ಪಕ್ಷ ಬಿಡುವ ಪ್ರಶ್ನೆ ಇಲ್ಲ' ಎಂದರು.

'ಪ್ರಧಾನಿ ನರೇಂದ್ರ ಮೋದಿ ನಮ್ಮ ನಾಯಕರು. ಯಡಿಯೂರಪ್ಪ ಇಲ್ಲಿಗೆ ಸಂಧಾನ ಮಾಡಲು ಬಂದಿಲ್ಲ. ಪಕ್ಷದ ಅಭ್ಯರ್ಥಿ ಗೆಲುವಿಗೆ ಸಿದ್ದತೆ ಮಾಡಲು ಬಂದಿದ್ದಾರೆ. ‌ನಾನು ಚಿಕ್ಕೋಡಿ ‌ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದೆ. ಟಿಕೆಟ್ ಕೈತಪ್ಪಿದ್ದರಿಂದ ನಿರಾಸೆಯಾಗಿಲ್ಲ. ಕಾರ್ಯಕರ್ತರ ನೋವು ಸ್ವಾಭಾವಿಕ. ಇದನ್ನು ಬಿಜೆಪಿ ಪಕ್ಷ ಸರಿಪಡಿಸಲಿದೆ' ಎಂದರು.

'ಬಿಜೆಪಿ ವಿರುದ್ಧ ಬಂಡಾಯ ಏಳುವ ಪ್ರಶ್ನೆಯೆ ಇಲ್ಲ'  ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !