ಮಂಗಳವಾರ, ಡಿಸೆಂಬರ್ 1, 2020
17 °C

ಮರಾಠಾ ಪ್ರಾಧಿಕಾರಕ್ಕೆ ವಿರೋಧ ಸಲ್ಲದು: ಶಾಸಕ ಅನಿಲ ಬೆನಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಮರಾಠಾ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿರೋಧ ಸಲ್ಲದು’ ಎಂದು ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಹೇಳಿದರು.

ಇಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕದಲ್ಲಿರುವ ಮರಾಠಾ ಸಮಾಜದವರು ಕನ್ನಡಿಗರೇ ಆಗಿದ್ದಾರೆ. ಹಿಂದುಳಿದ ಹಾಗೂ ಬಡತನದಲ್ಲಿರುವ ಅವರ ಅಭಿವೃದ್ಧಿಗಾಗಿ ಕರ್ನಾಟಕದಲ್ಲಿ ಪ್ರಾಧಿಕಾರ ರಚಿಸುವುದು ಯೋಗ್ಯವಾಗಿದೆ. ಈ ನಿಟ್ಟಿನಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ’ ಎಂದು ತಿಳಿಸಿದರು.

‘ಪ್ರಾಧಿಕಾರ ಬೇಕು ಎಂಬ ಬೇಡಿಕೆ ಇಂದು, ನೆನ್ನೆಯದಲ್ಲ. 1990ರಿಂದಲೇ ಈ ಬೇಡಿಕೆ ಇತ್ತು. ನಮ್ಮ ಸರ್ಕಾರ ಸ್ಪಂದಿಸಿದೆ. ಮರಾಠಿ ಭಾಷೆ ಹಾಗೂ ಮರಾಠಾ ಸಮಾಜ ಎರಡೂ ಒಂದೇ ಅಲ್ಲ. ಈ ವ್ಯತ್ಯಾಸ ತಿಳಿದರೆ ಪ್ರಾಧಿಕಾರದ ಅಗತ್ಯ ಮನವರಿಕೆ ಆಗುತ್ತದೆ. ಅನಗತ್ಯವಾಗಿ ವಿರೋಧ ಮಾಡುವುದು ಸರಿಯಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು