ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಇಲ್ಲಿನ ರಾಮಣ್ಣವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ, ಆಯುರ್ವೇದ ವೈದ್ಯೆ ಸುಶೀಲಾದೇವಿ ಬಸವಣ್ಣಪ್ಪ ರಾಮಣ್ಣವರ (101) ಅವರು ಸೋಮವಾರ ನಿಧನರಾದರು.

ಅವರ ಅಂತಿಮ ಇಚ್ಛೆಯಂತೆ ತಮ್ಮದೇ ಟ್ರಸ್ಟ್ ಮುಖಾಂತರ ಕೆಎಲ್ಇ ಸಂಸ್ಥೆಯ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯಕ್ಕೆ ಮಂಗಳವಾರ (ಮಾರ್ಚ್ 10) ದೇಹದಾನ ಮಾಡಲಾಗುವುದು.

ಸ್ವಾತಂತ್ರ್ಯ ಹೋರಾಟಗಾರ, ವೈದ್ಯರಾಗಿದ್ದ ಪತಿ ಬಿ.ಎಸ್.ರಾಮಣ್ಣವರ ಅವರು 18 ವರ್ಷಗಳ ಹಿಂದೆ ನಿಧನರಾಗಿದ್ದಾರೆ. ತಮ್ಮ ದೇಹವನ್ನು ತಮ್ಮ ಪುತ್ರನೇ ಛೇದನ ಮಾಡಿ ವೈದ್ಯ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕು ಎಂದು ಅವರು ಉಯಿಲು ಬರೆದಿದ್ದರು. ಅದರ ಪ್ರಕಾರ, ಪುತ್ರ ಡಾ.ಮಹಾಂತೇಶ ರಾಮಣ್ಣವರ ಅವರು ತಂದೆಯ ದೇಹ ಛೇದಿಸಿ ಪಾಠ ಮಾಡಿದ್ದರು. ಇದು ರಾಷ್ಟ್ರದಾದ್ಯಂತ ಗಮನ ಸೆಳೆದಿತ್ತು. ತಾಯಿ ಸುಶೀಲಾದೇವಿ ಕೂಡ ಅದೇ ರೀತಿಯ ಉಯಿಲು ಬರೆದಿದ್ದಾರೆ.

ದೇಹದಾನ, ಅಂಗಾಂಗ ದಾನಗಳ ಸಲುವಾಗಿಯೇ ಈ ವೈದ್ಯ ದಂಪತಿ ಟ್ರಸ್ಟ್ ಹುಟ್ಟುಹಾಕಿದ್ದಾರೆ. ಡಾ.ಮಹಾಂತೇಶ ಅವರು ವಿಶ್ವದ ಬೇರೆ ಬೇರೆ ಭಾಗಗಳಿಗೂ ಇದನ್ನು ಪರಿಚಯಿಸಿದ್ದಾರೆ. ಅಪಾರ ಸಂಖ್ಯೆಯ ಜನರಿಗೆ ಪ್ರೇರಣೆ ನೀಡಿದ್ದಾರೆ.

ಸುಶೀಲಾದೇವಿ ಅವರಿಗೆ ಮೂವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.