ಬುಧವಾರ, ಸೆಪ್ಟೆಂಬರ್ 18, 2019
25 °C

ಮಕ್ಕಳನ್ನು ಗುಡಿ ಮೇಲಿಂದ ಹಾಕಿದ ಭಕ್ತರು!

Published:
Updated:
Prajavani

ಅಥಣಿ: ತಾಲ್ಲೂಕಿನ ಗುಂಡೇವಾಡಿ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಸಂದರ್ಭದಲ್ಲಿ ಕೆಲವು ಭಕ್ತರು ಮಕ್ಕಳನ್ನು ದೇವಸ್ಥಾನದ ಮೇಲಿಂದ ಎಸೆದು ಹರಕೆ ತೀರಿಸಿದರು.

ದೇವಸ್ಥಾನದ ಕೆಳಗೆ ಕೆಲವರು ರಗ್ಗುಗಳನ್ನು ಹಿಡಿದು ನಿಂತಿರುತ್ತಾರೆ. ಅಲ್ಲಿಗೆ ಭಕ್ತರು ಮಕ್ಕಳನ್ನು ಹಾಕುತ್ತಾರೆ. ಹೀಗೆ ಮಾಡುವುದರಿಂದ ಒಳಿತಾಗುತ್ತದೆ, ಇಷ್ಟಾರ್ಥಗಳು ಸಿದ್ಧಿಸುತ್ತವೆ ಎನ್ನುವ ನಂಬಿಕೆ ಹಿಂದಿನಿಂದಲೂ ಇಲ್ಲಿನ ಜನರಲ್ಲಿದೆ.

ಇದೇ ವೇಳೆ, ದೇವಿ ಮೂರ್ತಿಯ ಮೆರವಣಿಗೆ ನಡೆಯಿತು. ಸಾವಿರಾರು ಮಂದಿ ಭಾಗವಹಿಸಿದ್ದರು.

Post Comments (+)