ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಕೆಜೋಳ, ಕಡಲೆಗೆ ಇ–ಟೆಂಡರ್ ವ್ಯವಸ್ಥೆ

Last Updated 7 ಫೆಬ್ರುವರಿ 2022, 13:54 IST
ಅಕ್ಷರ ಗಾತ್ರ

ಬೆಳಗಾವಿ: ಸವದತ್ತಿ ತಾಲ್ಲೂಕಿನ ಎಲ್ಲ ರೈತರಿಗೆ ಮೆಕ್ಕೆಜೋಳ ಮತ್ತು ಕಡಲೆ ಉತ್ಪನ್ನಗಳನ್ನು ಇ-ಟೆಂಡರ್ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಲ್ಲಿನ ಎಪಿಎಂಸಿ ತಿಳಿಸಿದೆ.

‘ಮೆಕ್ಕೆಜೋಳ ಹಾಗೂ ಕಡಲೆ ಉತ್ಪನ್ನವು ಪ್ರಮುಖ ಬೆಳೆಯಾಗಿದ್ದು, ಇಲ್ಲಿನ ರೈತರು ಹೆಚ್ಚಿನ ಪ್ರದೇಶಗಳಲ್ಲಿ ಬೆಳೆಯುತ್ತಿದ್ದಾರೆ. ಈಗಾಗಲೇ ಈ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಹತ್ತಿ ಹಾಗೂ ಶೇಂಗಾ ಬೆಳೆಯನ್ನು ಇ-ಟೆಂಡರ್ ಪದ್ಧತಿ ಮೂಲಕ ವ್ಯಾಪಾರ– ವಹಿವಾಟು ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುತ್ತಿದೆ. ಇದನ್ನು ಮೆಕ್ಕೆಜೋಳ ಹಾಗೂ ಕಡಲೆ ಉತ್ಪನಗಳಿಗೂ ವಿಸ್ತರಿಸಲಾಗುತ್ತಿದೆ’.

‘ಫೆ.14ರಿಂದ ಪ್ರತಿ ಸೋಮವಾರ ಹಾಗೂ ಗುರುವಾರದಂದು (ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ) ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಇ-ಟೆಂಡರ್ ಪದ್ಧತಿ ಮೂಲಕ ವ್ಯಾಪಾರ– ವಹಿವಾಟು ಆರಂಭಿಸಲಾಗುವುದು’ ಎಂದು ಮಾಹಿತಿ ನೀಡಿದೆ.

‘ರೈತರು ಮೆಕ್ಕೆಜೋಳ ಹಾಗೂ ಕಡಲೆ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದು ಇ-ಟೆಂಡರ್‌ನಲ್ಲಿ ಮಾರಿ ಸ್ಪರ್ಧಾತ್ಮಕ ಬೆಲೆ, ಸರಿಯಾದ ತೂಕ ಮತ್ತು ತಕ್ಷಣ ಹಣ ಪಡೆದುಕೊಳ್ಳಬಹುದು’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT