ಬುಧವಾರ, ಜನವರಿ 27, 2021
24 °C

ಕುಡಚಿ: ಈದ್ ಮಿಲಾದ್ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಡಚಿ: ಇಲ್ಲಿ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಕೋವಿಡ್ ಕಾರಣದಿಂದಾಗಿ ಸರಳವಾಗಿ ಶನಿವಾರ ಆಚರಿಸಿದರು.

ಪಟ್ಟಣ ಹಾಗೂ ಗ್ರಾಮೀಣ ಭಾಗದಿಂದ ಬಂದಿದ್ದ ಅವರು ಮಾಸಾಹೇಬಾ ದರ್ಗಾದಿಂದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ದೇವರ ನಾಮಸ್ಮರಣೆ ಮಾಡಿದರು. ಅವರಿಗೆ ಮುಖಂಡರು ಸಿಹಿ, ಶರಬತ್, ಚಹಾ ವಿತರಿಸಿದರು.

ಮುಖಂಡರಾದ ಮಹಮ್ಮದ ಹುಸೇನ ಓಮಿನಿ, ಸುಲ್ತಾನ ವಾಟೆ, ರಾಜು ನಿಡಗುಂದಿ, ಆಶಿಫ ಚಮನಶೇಖ, ಆತೀಫ ಪಟಾಯಿತ, ಅಮೀನ ವಾಟೆ ಇದ್ದರು.

ಮಸೀದಿಗಳನ್ನು ಸಿಂಗರಿಸಲಾಗಿತ್ತು. ಪಿಎಸ್ಐ ಶಿವರಾಜ ಧರಿಗೋಣ ನೇತೃತ್ವದಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು