ಸೋಮವಾರ, ಫೆಬ್ರವರಿ 24, 2020
19 °C

ಅಥಣಿ: ಪಿಕೆಪಿಎಸ್‌ಗೆ ಲಕ್ಷ್ಮಣ ಸವದಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ನಾಗನೂರ ಪಿ.ಕೆ. ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಕೆಪಿಎಸ್) ನಿರ್ದೇಶಕರ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ತವರೂರಿದು. ಅವರನ್ನು ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ. ಉಳಿದಂತೆ ಹಣಮಂತ ಹುದ್ದಾರ, ಗಂಗಪ್ಪ ಬಿಳ್ಳೂರ, ರಾವಸಾಬ ಐಗಳಿ, ಮಲ್ಲಪ್ಪ ಚೌಗಲಾ, ಮಹಿಳಾ ಸಾಲಗಾರರಿಗೆ ನಿಗದಿಯಾದ ಸ್ಥಾನಕ್ಕೆ ಶಾಂತವ್ವ ಕರಾಳೆ, ಮಲ್ಲಮ್ಮ ಪಾಟೀಲ, ಹಿಂದುಳಿದ ವರ್ಗ ‘ಎ’ನಿಂದ ಪರಪ್ಪ ಸವದಿ, ಬಸಪ್ಪ ತೇಲಿ, ಪರಿಶಿಷ್ಟ ಜಾತಿ ಸಾಲಗಾರರ ಮೀಸಲು ಸ್ಥಾನಕ್ಕೆ ಶ್ರೀಶೈಲ ಕಾಂಬಳೆ, ಬಿನ್‌ ಸಾಲಗಾರರ ವಿಭಾಗದಿಂದ ರಾಮಪ್ಪ ಗುಡ್ಡೆನ್ನವರ ಆಯ್ಕೆಯಾಗಿದ್ದಾರೆ.

ಇವರಲ್ಲಿ ಅಧ್ಯಕ್ಷರನ್ನಾಗಿ ಪರಪ್ಪಾ ಸವದಿ ಹಾಗೂ ಉಪಾಧ್ಯಕ್ಷರನ್ನಾಗಿ ಹಣಮಂತ ಹುದ್ದಾರ ಆಯ್ಕೆಯೂ ಅವಿರೋಧವಾಗಿ ನಡೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)