ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ| ವಿದ್ಯುತ್‌ ತಂತಿ ತಗಲಿ ಇಬ್ಬರು ಸ್ಥಳದಲ್ಲೇ ಸಾವು, ಒಬ್ಬ ಗಂಭೀರ

Last Updated 5 ಸೆಪ್ಟೆಂಬರ್ 2022, 17:23 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಸುಳಗಾ ಗ್ರಾಮದಲ್ಲಿ ಸೋಮವಾರ ಸಂಜೆ ಮಳೆ ನೀರು ಸೋರದಂತೆ ಮನೆ ಮಾಳಿಗೆ ಮನೆಯ ಮೇಲೆ ತಗಡಿನ ಪತ್ರಾಗಳನ್ನು ಹಾಕುವ ವೇಳೆ ವಿದ್ಯುತ್‌ ತಂತಿ ತಗಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಸುಳಗಾ ನಿವಾಸಿ ವಿನಾಯಕ ಕೃಷ್ಣ ಕಾಲಖಾಂಬಕರ (25), ಬೆನಕನಹಳ್ಳಿ ನಿವಾಸಿ ವಿಲಾಸ ಗೋ‍ಪಾಲ ಅಗಸಗೇಕರ (57) ಮೃತಪಟ್ಟವರು.

ವಿನಾಯಕ ಅವರ ಮನೆ ಮಳೆಯಿಂದಾಗಿ ಸೋರುತ್ತಿತ್ತು. ಈಗಾಗಲೇ ಇದ್ದ ತಗಡಿನ ಚಾವಣಿ ಮೇಲೆ ಹೊಸ ತಗಡುಗಳನ್ನು ಹಾಕಲು ವಿನಾಯಕ ಹಾಗೂ ವಿಲಾಸ ಚಾವಣಿ ಮೇಲೆ ಹತ್ತಿದ್ದರು. ಇವರಿಗೆ ಇನ್ನೊಬ್ಬ ಯುವಕ ನೆರವಾಗಿದ್ದರು. ಮನೆ ಮೇಲೆ ಹಾದು ಹೋದ ವಿದ್ಯುತ್‌ ತಂತಿಗೆ ತಗಡು ಸಿಕ್ಕಿಕೊಂಡಿದ್ದರಿಂದ ಅದರ ಮೂಲಕ ವಿದ್ಯುತ್‌ ಪ್ರವಹಿಸಿ, ಇಬ್ಬರೂ ಕ್ಷಣ ಮಾತ್ರದಲ್ಲೇ ಮೃತಪಟ್ಟರು. ನೆರವಿಗೆ ಬಂದಿದ್ದ ಇನ್ನೊಬ್ಬ ವ್ಯಕ್ತಿಗೂ ವಿದ್ಯುತ್‌ ತಂತಿ ತಗಲಿದ್ದರಿಂದ ಕೆಳಗೆ ಬಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
*
ಕೊಲೆ: ಆರು ಆರೋಪಿಗಳ ವಿರುದ್ಧ ದೂರು

ಯಮಕನಮರಡಿ: ಗ್ರಾಮದಲ್ಲಿ ಭಾನುವಾರ ರಾತ್ರಿ ಯುವಕ ವಿನಾಯಕ ಕೊಲೆಗೆ ಸಂಬಂಧಪಟ್ಟಂತೆ ಸೋಮವಾರ ಕುಟುಂಬದವರು ಏರು ಮಂದಿ ವಿರುದ್ಧ ದೂರು ನೀಡಿದ್ದಾರೆ.

ಏಳು ವರ್ಷಗಳ ಹಿಂದೆ ವಿನಾಯಕ ಹಾಗೂ ಹತ್ತರಗಿಯ ಸಂತೋಷ ಗುರವ ಮಧ್ಯ ಯಮಕನಮರಡಿ ಲಕ್ಷ್ಮಿ ಜಾತ್ರೆಯಲ್ಲಿ ತಂಟೆ ನಡೆದಿತ್ತು. ಅದೇ ದ್ವೇಷದಿಂದ ಸಂತೋಷ ಹಾಗೂ ಇತರ ಐವರು ಸಹಚರರು ಕೊಲೆ ಮಾಡಿದ್ದಾರೆ ಎಂದು ಕೊಲೆಯಾದವರ ಅಣ್ಣ ಸಾಗರ ಹೋರಕೇರಿ ದೂರು ನೀಡಿದ್ದಾರೆ.

ಬೈಕಿಗೆ ಬೆಂಕಿ

ಬೈಲಹೊಂಗಲ: ಆಕಸ್ಮಿಕವಾಗಿ ತಗಲಿದ ಬೆಂಕಿಯಿಂದ ದ್ವಿಚಕ್ರ ವಾಹನ ಸುಟ್ಟ ಘಟನೆ ತಾಲ್ಲೂಕಿನ ಜಾಲಿಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದಿದೆ. ಈ ಬೈಕ್‌ ಜಾಲಿಕೊಪ್ಪ ಗ್ರಾಮದ ನಿವೃತ್ತ ಶಿಕ್ಷಕರದ್ದಾಗಿದೆ ಎಂದು ಮಾಹಿತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT