ಜನಪದ ಸಾಹಿತ್ಯ, ಸಂಸ್ಕೃತಿ ಬೆಳೆಸಬೇಕು: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

7
ವಿಶ್ವ ಶೈಕ್ಷಣಿಕ ದಿನಾಚರಣೆ, ಪುಸ್ತಕಗಳ ಬಿಡುಗಡೆ

ಜನಪದ ಸಾಹಿತ್ಯ, ಸಂಸ್ಕೃತಿ ಬೆಳೆಸಬೇಕು: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

Published:
Updated:
Deccan Herald

ಬೆಳಗಾವಿ: ಆಧುನಿಕತೆ ಭರಾಟೆಯಲ್ಲಿ ಕಣ್ಮರೆಯಾಗುತ್ತಿರುವ ಜನಪದ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸದ್ಗುರು ಸಾಹಿತ್ಯ ಪ್ರತಿಷ್ಠಾನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ನಡೆದ ವಿಶ್ವ ಶೈಕ್ಷಣಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದಿನ ಕಾಲದ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದರು.

ಮುಕ್ತಿ ಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಾತನಾಡಿ, ‘ಯುವಜನತೆ ದೇಶದ ಸಂಸ್ಕೃತಿಯನ್ನು ಅರಿತು ನಡೆಯಬೇಕು. ನಿಷ್ಠೆಯಿಂದ ಕಾರ್ಯನಿರ್ವಹಿಸಿ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶಿಕ್ಷಕ ಸಮುದಾಯ ಶ್ರಮ ವಹಿಸಬೇಕು’ ಎಂದು ತಿಳಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸುಣಗಾರರ ಅವರ ‘ಅಭಿಮಾನದ ನನ್ನೂರು’ ಹಾಗೂ ನಿವೃತ್ತ ಮುಖ್ಯಶಿಕ್ಷಕ ಎಸ್.ಎಸ್. ಪಾಟೀಲರ ‘ಮಕ್ಕಳ ಮೋಜಿನ ನೀತಿ ಕಥೆಗಳು’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಸಮಾಜ ಸೇವಕ ಶ್ರೀಕೃಷ್ಣ ರಾಜೇಂದ್ರ ತಾಳೂಕರ, ಸರ್ಕಾರಿ ನೌಕರ ರವಿಶಂಕರ ಚನಾಳ, ನಿವೃತ್ತ ಯೋಧ ಅಥಣಿಯ ರಾಜು ಜಮಖಂಡಿಕರ, ಪತ್ರಕರ್ತ ಮಹದೇವ ಬಿರಾದಾರ, ಪ್ರಗತಿಪರ ರೈತ ನಿಂಗ್ಯಾನಟ್ಟಿಯ ಬಸನಗೌಡ ಹುದ್ದಾರ, ಶಿಕ್ಷಕರಾದ ವೈಜನಾಥ ಹಾಲನ್ನವರ, ವಿ.ಬಿ. ಹುಬಳೀಕರ, ರುದ್ರಪ್ಪ ಯಲ್ಲಪ್ಪ ಫಂಡಿ, ಬಿ.ಎನ್. ಪಾರಿಶ್ವಾಡಮಠ, ಶಿಕ್ಷಕಿಯರಾದ ಪ್ರಭಾವತಿ ಹೊಸಮನಿ, ಎಂ.ಬಿ. ಬಾಗೇವಾಡಿ, ಶಬಾನಾ ಅಣ್ಣಿಗೇರಿ ಅವರಿಗೆ 2018ನೇ ಸಾಲಿನ ‘ಕಾಯಕ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಹಿತಿ ಎಲ್.ಎಸ್. ಶಾಸ್ತ್ರಿ ಅವರನ್ನು ಸತ್ಕರಿಸಲಾಯಿತು. ಪತ್ರಕರ್ತ ಕಲ್ಯಾಣರಾವ್ ಮುಚಳಂಬಿ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಚಾರ್ಯ ಎಸ್.ಆರ್. ಹಿರೇಮಠ ಕೃತಿಗಳನ್ನು ಪರಿಚಯಿಸಿದರು.

ನಂತರ ಕವಿಗೋಷ್ಠಿ ನಡೆಯಿತು. ಶಿಕ್ಷಕರಾದ ಶರಣಪ್ಪ ಚಿಕ್ಕನಗೌಡರ ಪ್ರಾರ್ಥಿಸಿದರು. ಬಸವರಾಜ ಸುಣಗಾರ ಸ್ವಾಗತಿಸಿದರು. ರಾಜು ಕೋಲಕಾರ ನಿರೂಪಿಸಿದರು. ರಾಜೇಂದ್ರ ಗೋಶ್ಯಾನಟ್ಟಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !