ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನ್ಮ ದಿನದಂದು ಸಸಿ ನೆಟ್ಟು ಬೆಳೆಸಿ’

Last Updated 5 ಜೂನ್ 2019, 15:32 IST
ಅಕ್ಷರ ಗಾತ್ರ

ಅಥಣಿ: ‘ನಾವು ಪರಿಸರ ಕಾಳಜಿ ಮಾಡಿದರೆ ಪರಿಸರ ನಮ್ಮ ಕಾಳಜಿ ಮಾಡುತ್ತದೆ. ಹೀಗಾಗಿ, ಮಾಲಿನ್ಯ ತಡೆಯಲು ಎಲ್ಲರೂ ಮುಂದಾಗಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಇಒ ರವಿ ಬಂಗಾರೆಪ್ಪನವರ ಹೇಳಿದರು.

ಸಮೀಪದ ಸತ್ತಿ ಗ್ರಾಮದಲ್ಲಿ ಬಸವಶ್ರೀ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಘದ ಪಾಟೀಲ ಪಬ್ಲಿಕ್ ಇಂಗ್ಲಿಷ್ ಮಾಧ್ಯಮ ಶಾಲೆ, ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಳೆ, ಬೆಳೆ ಚೆನ್ನಾಗಿ ಆಗಬೇಕಾದರೆ ತಾಪಮಾನ ಕಡಿಮೆಯಾಗಬೇಕು. ಇದಕ್ಕಾಗಿ ಶಿಕ್ಷಕರು ಶಾಲಾ–ಕಾಲೇಜು ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು ಬೆಳೆಸುವಂತೆ ಪ್ರೇರಣೆ ನೀಡಬೇಕು’ ಎಂದು ತಿಳಿಸಿದರು.

‘ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಲೇ ಹೋಗುತ್ತಿದೆ. ಭೂಮಿಯ ತಾಪಮಾನ ಕಡಿಮೆಯಾಗಲು ಪ್ರತಿಯೊಬ್ಬರೂ ತಮ್ಮ ಹುಟ್ಟು ಹಬ್ಬದ ದಿನದಂದು ಸಸಿ ನೆಟ್ಟು ಬೆಳೆಸಭೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪ‍ಂಚಾಯ್ತಿ ಸದಸ್ಯ ಶ್ರೀಶೈಲ ಗಸ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಜಡೆಪ್ಪ ಕುಂಬಾರ, ರಾಣಿ ಚನ್ನಮ್ಮ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಧರೇಪ್ಪ ಶಿವಪ್ಪ ಠಕ್ಕಣ್ಣವರ, ಪಿಡಿಒ ಬಿ.ಎಸ್. ಹಿರೇಮಠ, ಮುಖಂಡರಾದ ಶ್ರೀನಿವಾಸ ಕುಲಕರ್ಣಿ, ಪುಲಿಕೇಶ ದೊಡಮನಿ, ಗಿರೀಶ ತೇಲಿ, ಅಣ್ಣಪ್ಪ ಹುದ್ದಾರ, ಗಿರೀಶ ಕುಲಕರ್ಣಿ, ಶೇಖರ ಬಾಡಗಿ, ಮಹಾಂತೇಶ ಗುಡ್ಡಾಪುರ, ಬಸವರಾಜ ಬಾಗೋಜಿ, ಶ್ರೀಶೈಲ ಹನಗಂಡಿ, ಬಸವರಾಜ ಪಾಟೀಲ,ಮುಖ್ಯಶಿಕ್ಷಕಿ ಚೇತನಾ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT