ನಿಪ್ಪಾಣಿ: ‘ಗುಣಮಟ್ಟದ ತಂತ್ರಜ್ಞಾನ ಬಳಸಿಕೊಂಡು ಕಾರ್ಖಾನೆಯಲ್ಲಿ ಪ್ರತಿದಿನ ಸರಾಸರಿ 1.50 ಲಕ್ಷ ಲೀಟರ್ ಎಥೆನಾಲ್ ಉತ್ಪಾದಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 3.47 ಕೋಟಿ ಲೀಟರ್ ಎಥೆನಾಲ್ ಉತ್ಪಾದಿಸಲಾಗಿದೆ. ಇದರಲ್ಲಿ ₹189.55 ಕೋಟಿಯ 3.05 ಕೋಟಿ ಲೀಟರ್ ಎಥೆನಾಲ್ ವಿವಿಧ ತೈಲ ಕಂಪೆನಿಗಳಿಗೆ ಮಾರಾಟ ಮಾಡಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರದ ‘ಎಥೆನಾಲ್ ಮಿಶ್ರಣ'ದ ಯೋಜನೆಯಲ್ಲಿ ನಾವೂ ಸಹ ಭಾಗಿಯಾಗಿದ್ದೇವೆ’ ಎಂದು ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ ಹೇಳಿದರು.

ಕಾರ್ಖಾನೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೈವಿಕ ಶಕ್ತಿ ಮತ್ತು ಪರಿಸರ ಸ್ನೇಹಿ ಇಂಧನಕ್ಕಾಗಿ ಎಥೆನಾಲ್ ಬಳಕೆಯು ಈ ಸಮಯದ ಅಗತ್ಯವಾಗಿದ್ದರಿಂದ ನಮ್ಮ ಕಾರ್ಖಾನೆಯ ಮಾರ್ಗದರ್ಶಕ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ನಮ್ಮ ಕಾರ್ಖಾನೆಯು ಈ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ನಮ್ಮ ಕಾರ್ಖಾನೆಯು ಫೆಬ್ರುವರಿ 2024 ರಿಂದ ಎಥೆನಾಲ್ ಉತ್ಪಾದನೆಯನ್ನು ಪ್ರಾರಂಭಿಸಿದೆ. ಇದರಿಂದಾಗಿ ನಮ್ಮ ಕಾರ್ಖಾನೆಯ ಆರ್ಥಿಕ ಸ್ಥಿತಿ ಸುಧಾರಿಸಿದೆ ಮತ್ತು ಕಾರ್ಖಾನೆಯು ತನ್ನ ಆರ್ಥಿಕತೆಯನ್ನು ಸುಧಾರಿಸುವ ಮೂಲಕ ಪ್ರಗತಿಯತ್ತ ಸಾಗುತ್ತಿದೆ’ ಎಂದರು.

‘₹25.35 ಕೋಟಿಯ 41.65 ಲಕ್ಷ ಲೀಟರ್ ಮಾತ್ರ ಎಥೆನಾಲ್ ಬಾಕಿ ಉಳಿದಿದೆ. 5728 ಎಚಿಟಿ ಮೊಲ್ಯಾಸಿಸ್ ಉಳಿದಿದ್ದು, ಇದರಿಂದ 17.29 ಲಕ್ಷ ಲೀಟರ್ ಎಥೆನಾಲ್ ಉತ್ಪಾದಿಸಬಹುದು, ಇದರ ಮೊತ್ತ ₹10.19 ಕೋಟಿ ಆಗಬಹುದು. ಈ ರೀತಿ ಕೇವಲ ಮೊಲ್ಯಾಸಿಸ್ದಿಂದ ಕಾರ್ಖಾನೆಯ ಆದಾಯ ₹225 ಕೋಟಿಯಷ್ಟು ನಿರೀಕ್ಷಿಸಲಾಗಿದೆ. ಎಲ್ಲಾ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗಳನ್ನು ಪೆಟ್ರೋಲಿಯಂ ಮತ್ತು ಇಂಧನ ಸಚಿವಾಲಯ ಮತ್ತು ಇತರ ಸರ್ಕಾರಿ ಕಚೇರಿಗಳ ಕಟ್ಟುನಿಟ್ಟಿನ ನಿಯಮಗಳಿಗೆ ಸಂಪೂರ್ಣವಾಗಿ ಅನುಗುಣವಾಗಿ ನಡೆಸಲಾಗುತ್ತಿದೆ. ನಾವು ನಮ್ಮ ಎಥೆನಾಲ್ ಅನ್ನು ಐಒಸಿಎಲ್, ಬಿಪಿಸಿಎಲ್, ಎಚ್ಪಿಸಿಎಲ್, ಎಂಆರ್ಪಿಎಲ್ ನಂತಹ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದೇವೆ’ ಎಂದರು.

‘ಭವಿಷ್ಯದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವತ್ತ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಇದರೊಂದಿಗೆ ಸ್ಥಳೀಯ ರೈತರಿಂದ ಕಬ್ಬು, ಮೆಕ್ಕೆಜೋಳ ಮತ್ತು ಇತರ ಕಚ್ಚಾ ವಸ್ತುಗಳನ್ನು ಬಳಸುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಮತ್ತು 150 ಕೆಎಲ್ಪಿಡಿಯಿಂದ 200 ಕೆಎಲ್ಪಿಡಿ ಸಿರಪ್ದಿಂದ, 100 ಕೆಎಲ್ಪಿಡಿ ಧಾನ್ಯದಿಂದ ಎಥೆನಾಲ್ ಉತ್ಪಾದಿಸುವ ಗುರಿ ಹೊಂದಿದ್ದೇವೆ. ನಮ್ಮ ಕಾರ್ಖಾನೆಯು ವಾಣಿಜ್ಯ ಉತ್ಪಾದನೆಗೆ ಮಾತ್ರ ಸೀಮಿತವಾಗಿಲ್ಲ ಆದರೆ ಪರಿಸರ ಸ್ನೇಹಿ ಮತ್ತು ಸುಸ್ಥಿರ, ಶಾಶ್ವತ ಅಭಿವೃದ್ಧಿಯತ್ತ ಸಕ್ರಿಯವಾಗಿದೆ’ ಎಂದರು.

ಕಾರ್ಖಾನೆಯ ಉಪಾಧ್ಯಕ್ಷ ಪವನಕುಮಾರ ಪಾಟೀಲ, ಸಂಚಾಲಕ ಅಪ್ಪಾಸಾಹೇಬ ಜೊಲ್ಲೆ, ರಾಮಗೊಂಡಾ ಪಾಟೀಲ, ವಿಶ್ವನಾಥ ಕಮತೆ, ಜಯವಂತ ಭಾಟಲೆ, ಅವಿನಾಶ ಪಾಟೀಲ, ರಾಜೇಂದ್ರ ಗುಂದೇಶಾ, ವಿನಾಯಕ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.