ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ‘ಎಕ್ಸಾಂ ಮಾಸ್ಟರ್‌ಮೈಂಡ್‌’ ನಾಳೆ ಬಿಡುಗಡೆ

Last Updated 26 ಸೆಪ್ಟೆಂಬರ್ 2021, 16:48 IST
ಅಕ್ಷರ ಗಾತ್ರ

ಬೆಳಗಾವಿ: ಅತ್ಯಂತ ವಿಶ್ವಾಸಾರ್ಹ ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಟ್‌’ ಪತ್ರಿಕಾ ಬಳಗವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಹೊರತಂದಿರುವ ‘ಎಕ್ಸಾಂ ಮಾಸ್ಟರ್‌ಮೈಂಡ್‌’ ಆನ್‌ಲೈನ್‌ ಪತ್ರಿಕೆ (ಇ–ಪೇಪರ್) ಬಿಡುಗಡೆ ಸಮಾರಂಭ ಸೆ.27ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಶಿವಬಸವನಗರದ ಎಸ್‌ಜಿಬಿಐಟಿಯ ಸೆಮಿನಾರ್‌ ಹಾಲ್‌ನಲ್ಲಿ ನಡೆಯಲಿದೆ.

ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಎಸ್ಪಿ ಲಕ್ಷ್ಮಣ ನಿಂಬರಗಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ ಹಾಗೂ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಬಿ. ಹಿರೇಮಠ ಬಿಡುಗಡೆ ಮಾಡುವರು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವರು.

ಯುಪಿಎಸ್‌ಸಿ, ಕೆಪಿಎಸ್‌ಸಿ, ಪಿಎಸ್‌ಐ, ಎಫ್‌ಡಿಎ, ಬ್ಯಾಂಕಿಂಗ್‌ ಪಿ.ಒ. ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ‘ಮಾಸ್ಟರ್‌ಮೈಂಡ್‌’ ಆನ್‌ಲೈನ್‌ ಪತ್ರಿಕೆಯು ಆಕಾಂಕ್ಷಿಗಳಿಗೆ ನೆರವಾಗಲಿದೆ. ಪರೀಕ್ಷಾ ಸಿದ್ಧತೆಗೆ ವಸ್ತುನಿಷ್ಠ ವಿಷಯಗಳು, ಪ್ರಚಲಿತ ವಿದ್ಯಾಮಾನ, ಸಾಮಾನ್ಯ ಜ್ಞಾನ, ಮಾನಸಿಕ ಸಾಮರ್ಥ್ಯ, ಭಾಷೆಯ ಅತ್ಯುನ್ನತ ಬಳಕೆ, ವಿಶ್ಲೇಷಣೆ, ಅಭಿಪ್ರಾಯ, ಸಂಪಾದಕೀಯ, ಪ್ರಬಂಧ ಮತ್ತು ಅನುವಾದ ಹಾಗೂ ಸಂದರ್ಶನಕ್ಕೆ ಸಹಾಯವಾಗುವ ಅಂಶಗಳನ್ನು ಮತ್ತು ಸಂಪನ್ಮೂಲವನ್ನು ಒಳಗೊಂಡಿರಲಿದೆ.

ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಇರುವ ಈ ಡಿಜಿಟಲ್ ಕೈಪಿಡಿಯಲ್ಲಿ ಪರೀಕ್ಷಾ ಸಹಾಯಕ ಟಿಪ್ಸ್‌, ಅಪ್‌ಡೇಟ್ಸ್‌, ಅಭ್ಯಾಸ ಪ್ರಶ್ನೆ ಪತ್ರಿಕೆಗಳು ಹಾಗೂ ಅರ್ಕೈವ್‌ ಮಾಡಿದ ವಿಷಯಗಳನ್ನು ವೀಕ್ಷಿಸಬಹುದಾಗಿದೆ. ಆಯ್ದ ವಿಷಯಗಳನ್ನು ವಿಡಿಯೊ ಸ್ವರೂಪ‍ದಲ್ಲಿ ವೀಕ್ಷಿಸಬಹುದಾಗಿದೆ. ಆಯ್ಕೆಯ ಆರ್ಟಿಕಲ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಅಭ್ಯಸಿಸಬಹುದು. ಚಂದಾದಾರರಾಗುವವರು ಬಳಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT