ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಕೊಳವೆಬಾವಿಗೆ ಬಿದ್ದು ರೈತ ಸಾವು

Last Updated 11 ಮೇ 2020, 15:58 IST
ಅಕ್ಷರ ಗಾತ್ರ

ಹಾರೂಗೇರಿ (ಬೆಳಗಾವಿ ಜಿಲ್ಲೆ): ರಾಯಬಾಗ ತಾಲ್ಲೂಕು ಸುಲ್ತಾನಪೂರ ಗ್ರಾಮದ ನಾಯಕ ತೋಟದ ಶಾಲೆ ಸಮೀಪದ ಹೊಲದಲ್ಲಿ ಲಕ್ಕಪ್ಪ ಸಂಗಪ್ಪ ದೊಡಮನಿ (38) ಕೊಳವೆಬಾವಿಗೆ ಬಿದ್ದು ಸೋಮವಾರ ಸಾವಿಗೀಡಾಗಿದ್ದಾರೆ. ಸಾಲ ಮಾಡಿ ತನ್ನ ಸ್ವಂತ ಹೊಲದಲ್ಲಿ 500 ಅಡಿಗಳಷ್ಟು ಆಳದ ಕೊಳವೆಬಾವಿ ಕೊರೆಸಿದ್ದರು. ಅದರಲ್ಲೇ ಅವರು ಪ್ರಾಣ ಕಳೆದುಕೊಂಡಿದ್ದಾರೆ.

ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಎನ್.ಡಿ.ಆರ್.ಎಫ್. ತಂಡಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿ, ಜೆಸಿಬಿಯಿಂದ ಗುಂಡಿ ತೆಗೆದು ಮೃತದೇಹವನ್ನು ಹೊರಗಡೆ ತೆಗೆದರು. ಸುಮಾರು 15 ಅಡಿಗಳಷ್ಟು ಆಳದಲ್ಲಿ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಎಸ್ಪಿ ಲಕ್ಷ್ಮಣ ನಿಂಬರಗಿ, ತಹಶೀಲ್ದಾರ್‌ ಚಂದಗ್ರಕಾಂತ ಭಜಂತ್ರಿ, ಅಥಣಿ ಡಿವೈಎಸ್‌ಪಿ ಗಿರೀಶ, ರಾಯಬಾಗ ಸಿಪಿಐ ಕೆ.ಎಸ್. ಹಟ್ಟಿ, ಹಾರೂಗೇರಿ ಠಾಣಾಧಿಕಾರಿ ಯಮನಪ್ಪ ಮಾಂಗ ಭೇಟಿ ನೀಡಿದ್ದರು.

ಮೃತರಿಗೆ ಪತ್ನಿ, 12 ವರ್ಷದ ಪುತ್ರ ಮತ್ತು 10 ವರ್ಷದ ಪುತ್ರಿ ಇದ್ದಾರೆ.ಹಾರೂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸುಲ್ತಾನಪುರದಲ್ಲಿ ಕೊಳವೆಬಾವಿಗೆ ಬಿದ್ದಿದ್ದ ರೈತ ಲಕ್ಕಪ್ಪ ಅವರ ಮೃತದೇಹವನ್ನು ನಿರಂತರ ಕಾರ್ಯಾಚರಣೆ ಮೂಲಕ ಹೊರತೆಗೆಯಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆದಿದ್ದು, ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ ಎನ್ನುವುದು ನಂತರ ಸ್ಪಷ್ಟವಾಗಲಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT