ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಕಾರ್ಖಾನೆಯವರಿಗೆ ರೈತರ ತರಾಟೆ: ವಿಡಿಯೊ ವೈರಲ್

Last Updated 14 ಜೂನ್ 2019, 15:00 IST
ಅಕ್ಷರ ಗಾತ್ರ

ಬೆಳಗಾವಿ: ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ್ದಕ್ಕೆ ಬರಬೇಕಾದ ಹಣದ ಬಾಕಿ ಪಾವತಿಯಾಗದೇ ಇರುವುದರಿಂದ ಸಹನೆ ಕಳೆದುಕೊಂಡ ಕೆಲವು ರೈತರು ಕಾರ್ಖಾನೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ಘಟನೆ ನಡೆದಿದೆ. ಆಕ್ರೋಶ ವ್ಯಕ್ತಪಡಿಸಿದವರು ಕೌಜಲಗಿ ಗ್ರಾಮದ‌ ರೈತರು ಎನ್ನಲಾಗಿದೆ.

‘ಆರು ತಿಂಗಳಿಂದಲೂ ಅಲೆಯುತ್ತಿದ್ದೇವೆ. ಆದರೆ, ಹಣ ಸಂದಾಯವಾಗಿಲ್ಲ. ಅಲ್ಲಿಂದ ಇಲ್ಲಿಗೆ ಬರಬೇಕಾದರೆ ಎಷ್ಟು ಖರ್ಚಾಗುತ್ತದೆ, ಎಷ್ಟು ತೊಂದರೆಯಾಗುತ್ತದೆ ನೀವೇ ಹೇಳಿ? ಚೆಕ್ ಕೊಟ್ಟಿದ್ದರೂ ಖಾತೆಯಲ್ಲಿ ಹಣವಿಲ್ಲದೇ ಇದ್ದಿದ್ದರಿಂದ ಬೌನ್ಸ್ ಆಗಿದೆ. ಕಬ್ಬು ಕೊಟ್ಟಿದ್ದೇ ತಪ್ಪಾಯ್ತಾ? ಇದ್ಯಾವ ನ್ಯಾಯ ಹೇಳಿ’ ಎಂದು ಪ್ರಶ್ನಿಸಿರುವುದು ವಿಡಿಯೊದಲ್ಲಿದೆ. ‘ಒಂದಿಲ್ಲೊಂದು ದಿನಾಂಕ ಹೇಳಿ ಅಲೆದಾಡಿಸಲಾಗುತ್ತಿದೆ. ಎಷ್ಟೆಂದು ತ್ರಾಸು ಅನುಭವಿಸುವುದು?’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT