ಸೋಮವಾರ, ಡಿಸೆಂಬರ್ 16, 2019
17 °C

ಮೆಕ್ಕೆಜೋಳಕ್ಕೆ ‘ಲದ್ದಿಹುಳು’ ಕಾಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಲಸಂಗ: ‘ಮೆಕ್ಕೆಜೋಳದ ತೆನೆಯಲ್ಲಿ ಲದ್ದೆ ಹುಳು ಕಾಣಿಸಿಕೊಂಡಿದ್ದು, ಸತತ ಬರದಿಂದ ತತ್ತರಿಸಿದ್ದ ರೈತರಿಗೆ ಬರೆ ಎಳೆದಂತಾಗಿದೆ. ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಸರ್ಕಾರ ನೆರವಾಗಬೇಕು’ ಎಂದು ಗ್ರಾಮದ ರೈತರಾದ ಬಸವರಾಜ ರೊಟ್ಟಿ, ಸುಭಾಸ್ ಖೊಬ್ರಿ, ಶೇಖರ ವಳಸಂಗ್ ಒತ್ತಾಯಿಸಿದರು.

‘ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದೇವು. ಮಳೆ ಕಡಿಮೆಯಾದ ಪರಿಣಾಮ ಕೆಲವರ ಬೆಳೆ ಒಣಗಿ ಹೋಗಿದೆ. ಇನ್ನು ಬೋರ್‌ವೆಲ್‌ನಲ್ಲಿದ್ದ ಅಲ್ಪಪ್ರಮಾಣದ ನೀರು ಹಾಯಿಸಿ ಉಳಿಸಿಕೊಂಡ ಬೆಳೆಗೆ ಲದ್ದೆ ಹುಳು ಕಾಣಿಸಿಕೊಂಡಿದ್ದರಿಂದ ನಷ್ಟವಾಗಿದೆ. ಎಲ್ಲೆಡೆ ಮಳೆಯಾಗಿ ಪ್ರವಾಹ ಬಂದಿದ್ದರೆ, ತೆಲಸಂಗ ಹೋಬಳಿ ಬಾಗದ ಹಳ್ಳಿಗಳಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಆಗಿಲ್ಲ’ ಎಂದು ತಿಳಿಸಿದರು.

ಮೆಕ್ಕೆಜೋಳದ ಹೊಲಗಳಿಗೆ ಭೇಟಿ ನೀಡಿದ ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ, ‘ಎರಡು ವರ್ಷದಿಂದ ಹೊಸ ನಮೂನೆಯ ಲದ್ದಿ ಹುಳು ಕೀಡೆಯು ಕಂಡುಬರುತ್ತಿದೆ. ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಹಾಕಿದ ಒಂದು ತಿಂಗಳ ಬೆಳೆಯಲ್ಲಿ ಕಾಣಿಸಿಕೊಂಡಿದೆ. ಹೊಲಗಳಿಗೆ ಭೇಟಿ ನೀಡಿ ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸುತ್ತಿದ್ದೇವೆ. ಈ ಕೀಡೆಗಳು ಸುಳಿಯಲ್ಲಿದ್ದುಕೊಂಡು ರಾತ್ರಿ ಹೊತ್ತು ಬೆಳೆ ಹಾಳು ಮಾಡುತ್ತವೆ. ಔಷಧ ಸಿಂಪಡಿಸುವ ಮೂಲಕ ನಿಯಂತ್ರಿಸಬಹುದಾಗಿದೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)