ಮಂಗಳವಾರ, ಸೆಪ್ಟೆಂಬರ್ 17, 2019
24 °C

ಶಂಕಿತ ಡೆಂಗಿ: ಎಫ್‌ಡಿಎ ಸಾವು

Published:
Updated:
Prajavani

ಅಥಣಿ: ಶಂಕಿತ ಡೆಂಗಿ ಜ್ವರದಿಂದಾಗಿ ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಗುಮಾಸ್ತ (ಎಫ್‌ಡಿಎ) ಪ್ರಶಾಂತ ಅಣ್ಣಪ್ಪ ಮೇಣಸಂಗಿ (26) ಸೋಮವಾರ ನಿಧನರಾದರು.

ಅವರು ಆ. 2ರಿಂದ ನೆರೆ ಹಾವಳಿ ಪ್ರದೇಶದ ಮುರಗುಂಡಿ ಪರಿಹಾರ ಕೇಂದ್ರದಲ್ಲಿ ಸಾಹಾಯಕ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲವು ದಿನಗಳಿಂದ ಕೆಮ್ಮು, ಜ್ವರದಿಂದಾಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಮಹಾರಾಷ್ಟ್ರದ ಮೀರಜ್‌ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Post Comments (+)