ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯದ ಹೃದಯವಂತಿಕೆ ಎಲ್ಲರಲ್ಲಿರಲಿ

ಎಸ್.ಆರ್. ಪಾಟೀಲ ಆಶಯ
Last Updated 8 ಡಿಸೆಂಬರ್ 2019, 20:01 IST
ಅಕ್ಷರ ಗಾತ್ರ

ಬೆಳಗಾವಿ: ‘ಪ್ರತಿಯೊಂದು ಕ್ಷೇತ್ರದಲ್ಲೂ ರೆಡ್ಡಿ ಸಮಾಜ ಮುಂಚೂಣಿಯಲ್ಲಿದೆ. ಬಡವರಿಗೆ ಸಹಾಯ ಮಾಡುವ ಹೃದಯವಂತಿಕೆ ನಮ್ಮೆಲ್ಲರಲ್ಲಿ ಇನ್ನೂ ಹೆಚ್ಚು ಬೆಳೆಯಲಿ’ ಎಂದು ವಿಧಾನಪರಿಷತ್ ವಿರೋಧಪಕ್ಷದ ನಾಯಕ ಎಸ್.ಆರ್‌. ಪಾಟೀಲ ಹೇಳಿದರು.

ಇಲ್ಲಿನ ಸದಾಶಿವ ನಗರದಲ್ಲಿ ರೆಡ್ಡಿ ಸಂಘದಿಂದಭಾನುವಾರಹಮ್ಮಿಕೊಂಡಿದ್ದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ, ಮಹಾಯೋಗಿ ವೇಮನ, ವೇಮನಾನಂದ ಸ್ವಾಮೀಜಿ ಅವರ ಆಶೀರ್ವಾದ ರೆಡ್ಡಿ ಸಮಾಜದ ಮೇಲಿದೆ. ಜೊತೆಗೆ ರೆಡ್ಡಿ ಸಮಾಜದಲ್ಲಿ ಕೊಡುವ ಕೈಗಳು ಹೆಚ್ಚಿರುವ ಕಾರಣದಿಂದಭವ್ಯವಾದ ಕಟ್ಟಡ ನಿರ್ಮಿಸಲು ಸಾಧ್ಯವಾಗಿದೆ. ಬೆಳಗಾವಿ ರೆಡ್ಡಿ ಸಂಘದಿಂದ ಸನ್ಮಾನ ಮಾಡಿರುವುದು ನನಗೆ ಜವಾಬ್ದಾರಿ ಹೆಚ್ಚಿಸಿದೆ. ಸಮಾಜ, ಸಂಘದ ಅಭಿವೃದ್ಧಿಗೆ ಸಹಾಯ, ಸಹಕಾರ ನೀಡಲು ಸದಾ ನಿಮ್ಮೊಂದಿಗೆ ಇರುತ್ತೇನೆ’ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ, ‘ಮನುಷ್ಯ ಪರೋಪಕಾರದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸಮಾಜಕ್ಕಾಗಿ ಬದುಕಿದವರನ್ನು ಎಲ್ಲ ಕಾಲದಲ್ಲೂ ನೆನೆಯುತ್ತೇವೆ. ಅದೇ ದಾರಿಯಲ್ಲಿಯೇ ನಾವೂ ಸಹ ಮುನ್ನಡೆಯಬೇಕು’ ಎಂದರು.

‘ಗ್ರಾಮೀಣ ಭಾಗದ ರೆಡ್ಡಿ ಸಮಾಜದ ಯುವತಿಯರು ವ್ಯವಸ್ಥಿತವಾದ ವಸತಿನಿಲಯಗಳಿಲ್ಲದೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಅವರಿಗೆ ಉತ್ನನ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ವಸತಿ ಗೃಹ ನಿರ್ಮಿಸುವುದು ಸಂತಸದ ವಿಷಯ. ಇದೇ ರೀತಿ ಸಮಾಜದಲ್ಲಿ ಸಹಕಾರ ಸಹಬಾಳ್ವೆಯಿಂದ ಬದುಕಬೇಕು’ ಎಂದು ಸಲಹೆ ನೀಡಿದರು.

ರೆಡ್ಡಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ದಾನ ನೀಡಿರುವ ಡಾ.ವಿ.ಎಸ್. ಪಾಟೀಲ ಹಾಗೂ ಹಣದ ಸಹಾಯ ಮಾಡಿದ ರಾಜೇಂದ್ರ ಪಾಟೀಲ ದಂಪತಿಗಳನ್ನು ಸನ್ಮಾನಿಸಲಾಯಿತು.

ಮುಖಂಡರಾದ ಶಿವಶಂಕರಗೌಡ ಪಾಟೀಲ, ಟಿ.ಕೆ. ಪಾಟೀಲ, ಬಿ.ಎಸ್. ನಾಡಗೌಡ ಇದ್ದರು.

ರೆಡ್ಡಿ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಮುಳ್ಳೂರ ಅಧ್ಯಕ್ಷತೆ ವಹಿಸಿದ್ದರು. ಬಿ.ಎನ್. ಬಾವಲತ್ತಿ ಪ್ರಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT