ಭಾನುವಾರ, ಜೂನ್ 26, 2022
21 °C

ಎದೆ ನಡುಗಿಸಿದ ಶಬ್ದ ಬಂದಿದ್ದು ಎಲ್ಲಿಂದ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರದಲ್ಲಿ ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಕೆಲಕಾಲ ಆಗಸದಿಂದ ಕೇಳಿಬಂದ ಜೋರು ಶಬ್ದ ಜನರ ಎದೆನಡುಗಿಸಿತು.

ನಿವಾಸಿಗಳು ಆತಂಕ ಹಾಗೂ ಗೊಂದಲದಿಂದ ಮನೆಗಳಿಂದ ಹೊರ ಬಂದು ಆಕಾಶದತ್ತ ದೃಷ್ಟಿ ಹಾಯಿಸಿದ ದೃಶ್ಯ ಸಾಮಾನ್ಯವಾಗಿತ್ತು. ವಿಶೇಷವಾಗಿ ಮಕ್ಕಳು ವಿಮಾನಗಳನ್ನು ಕಣ್ತುಂಬಿಕೊಳ್ಳಲು ಗಗನದತ್ತ ನೋಡುತ್ತಿದ್ದರು.

ಇಲ್ಲಿನ ಸಾಂಬ್ರಾದಲ್ಲಿ ವಿಮಾನನಿಲ್ದಾಣ ಹಾಗೂ ವೈಮಾನಿಕ ತರಬೇತಿ ಶಾಲೆಯೂ ಇರುವುದರಿಂದ ವಿಮಾನಗಳು ಹಾರಾಡುವ ಶಬ್ದ ಆಗಾಗ ಸಾಮಾನ್ಯವಾಗಿ ಕೇಳಿಬರುತ್ತಿರುತ್ತದೆ. ಆದರೆ, ಶುಕ್ರವಾರ ಆಕಾಶವನ್ನು ಸೀಳಿಕೊಂಡು ಹೋಗುತ್ತಿದ್ದ ವಿಮಾನಗಳು ಬಹಳ ಶಬ್ದವನ್ನು ಉಂಟು ಮಾಡಿದವು. ಜೊತೆಗೆ ಕುತೂಹಲವನ್ನೂ ಮೂಡಿಸಿದವು. ಅವು ತೀರಾ ಕೆಳಮಟ್ಟದಲ್ಲಿ ಹಾರಾಡಿದ ಸುದ್ದಿಯು ಕೆಲಕಾಲ ಆತಂಕವನ್ನೂ ಹರಡಿತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲೂ ಬಹಳ ಚರ್ಚೆಯಾಯಿತು.

‘ಅವು ಭಾರತೀಯ ವಾಯುಸೇನೆಗೆ ಸೇರಿದ ಮಿಗ್–29ಕೆ ಫೈಟರ್‌ ವಿಮಾನಗಳು. ತರಬೇತಿಯಲ್ಲಿ ಅವನ್ನು ಬಳಸಲಾಯಿತು. ಮೂರು ವಿಮಾನಗಳು ಇಲ್ಲಿನ ಆಗಸದಲ್ಲಿ ಹಾರಾಡಿದವು. ಬಹಳ ಕೆಳಮಟ್ಟದಲ್ಲಿ ಅವುಗಳು ಹಾರಾಡಿದ್ದರಿಂದಾಗಿ ಬಹಳ ಶಬ್ದ ಕೇಳಿಸಿತು. ಸಾಂಬ್ರಾ ವಿಮಾನನಿಲ್ದಾಣದಲ್ಲಿ ಅವು ಇಳಿದಿದ್ದವು’ ಎಂದು ವಿಮಾನನಿಲ್ದಾಣದ ಮೂಲಗಳು ಖಚಿತಪಡಿಸಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.