ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚಲಿ: ಫುಟ್ಬಾಲ್ ಟೂರ್ನಿಗೆ ಚಾಲನೆ

ಕ್ರೀಡೆಯಲ್ಲಿ ಭಾಗವಹಿಸಿ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ
Last Updated 9 ಜನವರಿ 2021, 13:53 IST
ಅಕ್ಷರ ಗಾತ್ರ

ಹಂದಿಗುಂದ: ರಾಯಬಾಗ ತಾಲ್ಲೂಕಿನ ಚಿಂಚಲಿಯ ಮಹಾಕಾಳಿ ಶಿಕ್ಷಣ ಸಂಸ್ಥೆಯ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಹಾಕಾಳಿ ಫುಟ್ಬಾಲ್ ಅಕಾಡೆಮಿ ಆಯೋಜಿಸಿರುವ ‘ಮಹಾಕಾಳಿ ಚಾಂಪಿಯನ್ಸ್ ಟ್ರೋಫಿ–2021’ ರಾಷ್ಟ್ರಮಟ್ಟದ ಫುಟ್ಬಾಲ್‌ ಟೂರ್ನಿಗೆ ಶನಿವಾರ ಚಾಲನೆ ದೊರೆಯಿತು.

ಸಸಿಗೆ ನೀರೆರೆದು ಉದ್ಘಾಟಿಸಿದ ಮಹಾರಾಷ್ಟ್ರದ ಕೊಲ್ಹಾಪುರ ಸಂಸ್ಥಾನದ ಶ್ರೀಮಂತ ಮಾಲೋಜಿರಾಜೆ ಛತ್ರಪತಿ ಮಾತನಾಡಿ, ‘ಗ್ರಾಮೀಣ ಕ್ರೀಡಾಪಟುಗಳಿಗೆ ವಿವೇಕರಾವ ಪಾಟೀಲರು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಮಕ್ಕಳು ಈ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದುತ್ತಾರೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಸಹೋದರತೆಯ ಮನೋಭಾವ ಬೆಳೆಯುತ್ತದೆ’ ಎಂದರು.

‘ರಾಷ್ಟ್ರಮಟ್ಟದ ಟೂರ್ನಿಯನ್ನು ನಗರ ಪ್ರದೇಶ ಹಾಗೂ ಪಟ್ಟಣಗಳಲ್ಲಿ ಹೆಚ್ಚು ಆಯೋಜಿಸುತ್ತಾರೆ. ಇಲ್ಲಿ ಗ್ರಾಮೀಣ ಮಟ್ಟದಲ್ಲಿ ನಡೆಸುತ್ತಿರುವುದು ವಿಶೇಷವಾಗಿದೆ. ಯುವಕರು ಆಟೋಟಗಳಲ್ಲಿ ಪಾಲ್ಗೊಂಡು ಆರೋಗ್ಯ ವೃದ್ಧಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ವಿಧಾನಪರಿಷತ್ ಸದಸ್ಯ ಹಾಗೂ ಬೆಮುಲ್ ಅಧ್ಯಕ್ಷ ವಿವೇಕರಾವ ಪಾಟೀಲ ಮಾತನಾಡಿ, ‘ಕ್ರೀಡೆಯಲ್ಲಿ ಸೋಲು– ಗೆಲವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ನಿಯಮ ಪಾಲಿಸಬೇಕು. ಗ್ರಾಮೀಣ ಪ್ರತಿಭೆಗಳು ರಾಷ್ಟ್ರ ಮಟ್ಟದಲ್ಲಿ ಸಾಧನೆ ತೋರಬೇಕು. ಇದಕ್ಕಾಗಿ ವೇದಿಕೆ ಕಲ್ಪಿಸಲು ಕ್ರೀಡಾಕೂಟಗಳನ್ನು ನಡೆಸಲಾಗುತ್ತಿದೆ’ ಎಂದರು.

ಬೆಂಗಳೂರು, ಕೇರಳ, ಮುಂಬೈ, ಕೊಲ್ಹಾಪುರ, ಕೊಡಗು, ನಿಪ್ಪಾಣಿ, ರಾಯಬಾಗ, ಜಮಖಂಡಿ, ಮೀರಜ್, ಸಾಂಗ್ಲಿ, ಗೋಕಾಕ, ಚಿಂಚಲಿ, ಬೆಳಗಾವಿ ತಂಡಗಳು ಭಾಗವಹಿಸಿದ್ದವು.

ಮೊದಲ ದಿನ ಬೆಂಗಳೂರು ತಂಡವು ಬೆಳಗಾವಿ ವಿರುದ್ಧ 1–0, ಕೊಲ್ಹಾಪುರ ತಂಡವು ರಾಯಬಾಗ ವಿರುದ್ಧ 5–0, ಮುಂಬೈ ತಂಡವು ಗಡಿಂಗ್ಲಜ್ ವಿರುದ್ಧ 4–1 ಗೆಲುವು ಸಾಧಿಸಿತು.

ರಾಷ್ಟ್ರಮಟ್ಟದ ನಿರ್ಣಾಯಕರಾದ ಇಬ್ರಾಹಿಂ, ದರ್ಶನ, ಶ್ಯಾಮಸುಂದರ, ಅನಿಲ ಮತ್ತು 400 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಶಾಸಕ ಮಹೇಶ ಕುಮಠಳ್ಳಿ, ಮುಖಂಡರಾದ ಜೆ.ಆರ್. ಜಾಧವ, ಅಶೋಕ ಆಸೋದೆ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮಹಾದೇವ ಪಡೋಳಕರ, ರಾಜು ಬಣಗೆ, ನವೀನ ಪಟೇಕರಿ, ಅಜಿತ ದಂಡಾಪುರೆ, ಸುಜಿತ ಪೂಜೇರಿ, ಅಜಿತ ಪಾಟೀಲ, ತಮ್ಮಣ್ಣ ವಡ್ಡರ, ಅಕ್ಷಯ ಸೌದಲಗಿ, ಸಂಜು ಸೌದಲಗಿ, ತಮ್ಮಣ್ಣ ವಡ್ಡರ, ರಾಜು ಶಿಂಧೆ, ವಿಶ್ವನಾಥ ಪಾಟೀಲ, ರಮೇಶ ಪಾಟೀಲ, ಅಮಿತ ಚೌಗಲಾ, ಆದರ್ಶ ಪೂಜೇರಿ, ಅಕ್ಷಯ ಸೌದಲಗಿ, ಶ್ರೀಶೈಲ ಪಾಟೀಲ, ಕುಮಾರ ಹಾರೂಗೇರಿ, ಭೀಮು ಬಣಗೆ, ಅಂತು ಬಣಗೆ, ಮಹಾವೀರ ಕೋಳಿ, ಸಂಭಾ ಶಿಂಧೆ, ವಿಶ್ವನಾಥ ಜಲಾಲಪುರೆ, ಅಜಿತ ಘೋಗಡಿ, ದಿಗ್ವಿಜಯ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT