ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಪ್ರತಿನಿಧಿಗಳೊಂದಿಗೆ ಸಂಘಟಿತ ಹೋರಾಟ’

Last Updated 28 ಮೇ 2019, 11:15 IST
ಅಕ್ಷರ ಗಾತ್ರ

ಬೆಳಗಾವಿ: ‘ಸೌಲಭ್ಯ ಪಡೆಯುವುದಕ್ಕೂ, ಉಳಿಸಿಕೊಳ್ಳುವುದಕ್ಕೂ ಬೆಳಗಾವಿಯವರು ಪ್ರತಿ ಬಾರಿ ಪ್ರತಿಭಟಿಸಬೇಕಾದ ಸ್ಥಿತಿ ಇರುವುದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಎಫ್‌ಒಎಬಿ (ಫೋರಮ್ ಆಫ್ ಅಸೋಸಿಯೇಷನ್ ಆಫ್ ಬೆಳಗಾವಿ), ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳಲು ಸಂಘಟಿತ ಹೋರಾಟ ಮಾಡಬೇಕು’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದೆ.

ತೀವ್ರ ಹೋರಾಟದ ನಂತರ ‘ಉಡಾನ್’ ಯೋಜನೆಯಡಿ ಬಂದಿರುವ ವಿಮಾನ ಹುಬ್ಬಳ್ಳಿಗೆ ಸ್ಥಳಾಂತರವಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಸಭೆ ವೇದಿಕೆಯ ಪದಾಧಿಕಾರಿಗಳು, ವಿಮಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಸದರಾದ ಸುರೇಶ ಅಂಗಡಿ ಮತ್ತು ಪ್ರಭಾಕರ ಕೋರೆ ನಡೆಸುತ್ತಿರುವ ಪ್ರಯತ್ನವನ್ನು ಶ್ಲಾಘಿಸಿತು.

ಸಂಸದರು ಸೇರಿದಂತೆ ಬೆಳಗಾವಿ ಎಲ್ಲ ಜನಪ್ರತಿನಿಧಿಗಳು ಜಿಲ್ಲೆಯ ಅಭಿವೃದ್ಧಿಗಾಗಿ ಮಾಡುವ ಕೆಲಸಗಳಿಗೆ ಎಲ್ಲ ಸಂಘಟನೆಗಳೂ ಕೈಜೋಡಿಸಲಿದೆ ಎಂದು ತಿಳಿಸಿತು. ಮುಂದಿನ ವಾರ ಸಂಸದರನ್ನು ಸನ್ಮಾನಿಸಲು ನಿರ್ಧರಿಸಿತು.

ಈಗ ಇರುವ ಎಲ್ಲ ವಿಮಾನಗಳನ್ನು ಮುಂದುವರಿಸಬೇಕು. ಇನ್ನೂ ಹೆಚ್ಚಿನ ವಿಮಾನ ಸೌಲಭ್ಯಗಳನ್ನು ನೀಡಬೇಕೆನ್ನುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಹಾಗೂ ಏರ್‌ಲೈನ್ಸ್ ಮುಖ್ಯಸ್ಥರಿಗೆ ಪ್ರತಿಯೊಂದು ಸಂಘಟನೆಗಳ ವತಿಯಿಂದ ಪತ್ರ ಬರೆಯಲು ತೀರ್ಮಾನಿಸಲಾಯಿತು.

ವೇದಿಕೆ ಅಧ್ಯಕ್ಷ ಬಿ.ಎಸ್. ಪಾಟೀಲ, ಕ್ರಡಾಯ್‌ ರಾಜ್ಯ ನಿಯೋಜಿತ ಅಧ್ಯಕ್ಷ ಚೈತನ್ಯ ಕುಲಕರ್ಣಿ, ಜಿಲ್ಲಾ ಘಟಕ ಅಧ್ಯಕ್ಷ ರಾಜೇಶ ಹೆಡಾ, ಬೆಳಗಾವಿ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷ ಮಹೇಶ ಬಾಗಿ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್ ಜುವಳಿ, ಆನಂದ ಹಾವಣ್ಣವರ್, ಮಲ್ಲಿಕಾರ್ಜುನ ಮುದ್ನೂರ್, ಯೋಗೇಶ ಕುಲಕರ್ಣಿ, ಡಾ.ಎಚ್.ಬಿ. ರಾಜಶೇಖರ, ಎಚ್.ಎನ್. ಶಿರಗಾವಿ, ಡಾ.ನೇತ್ರಾವತಿ ಸಬ್ನಿಸ್, ಅನಿಲ ಇಂಗಳೇರಿ, ಜಯಕುಮಾರ ಪಾಟೀಲ, ಎಂ.ಎಸ್. ಬಳಿಗಾರ, ಬಿ.ಜಿ. ಧರೆಣ್ಣಿ, ಅಜಯ ಅಸುಂಡಿ, ರಾಜೇಂದ್ರ ಮುಂದಡಾ, ಉಮೇಶ ಬೋಲ್ ಮಾಲ್, ಡಾ.ಬಿ.ಬಿ. ಪುಟ್ಟಿ, ಎಂ.ಕೆ. ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT